ಹೊಳೆನರಸೀಪುರ : ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಿಜಿಪಿಎ 2.77 ಅಂಕ ಪಡೆಯುವ ಮೂಲಕ B++ಮಾನ್ಯತೆ ಪಡೆದುಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಹರ್ಷವರ್ಧನ್ ಸಿಎನ್ ಮಾಹಿತಿ ನೀಡಿದರು
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಕಾಲೇಜಿನ ಅಭಿವೃದ್ಧಿ ಹಾಗೂ ಸೌಲಭ್ಯಗಳ ಪ್ರಾಮುಖ್ಯತೆಯನ್ನು ಪರಿಗಣಿಸಿದ ಕೇಂದ್ರೀಯ ವಿಶ್ವವಿದ್ಯಾನಿಲಯ ಉಪಕುಲಪತಿಗಳ ನೇತೃತ್ವದ ನ್ಯಾಕ್ ಟೀಮ್ ಭೇಟಿ ನೀಡಿ ಕಾಲೇಜಿನಲ್ಲಿ ಮೌಲ್ಯಮಾಪನ ಮಾಡುವ ಮೂಲಕ ಶ್ರೇಣಿಯನ್ನು ನೀಡಿ ಕಾಲೇಜಿಗೆ ಗೌರವ ತಂದುಕೊಟ್ಟಿದ್ದಾರೆ ಎಂದು ತಿಳಿಸಿದರು. ನ್ಯಾಕ್ ತಂಡದ ಉಪಕುಲಪತಿ ರಾಜಶೇಖರ್ ಬೆಲ್ಲಂಕೊಂಡ ಅವರ ತಂಡ ಡಿಸೆಂಬರ್ 21 ಮತ್ತು 22 ರಂದು ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಮೌಲ್ಯಮಾಪನ ಮತ್ತು ಶೈಕ್ಷಣಿಕ ಗುಣಮಟ್ಟದ ವಿಚಾರವಾಗಿ ಪರಿಶೀಲಿಸಿದರು ಎಂದು ಹೇಳಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಕಾರಿಣಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿದರು ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 1404 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಅಧಿಕ ಪ್ರಮಾಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಜೊತೆಗೆ ಹೊರ ಜಿಲ್ಲೆಗಳಿಂದಲೂ ಕೂಡ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು ವಸತಿ ನಿಲಯಗಳಲ್ಲಿ ನೆಲಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಪದವಿ ಪಡೆಯುವುದರ ಜೊತೆಗೆ ವೃತ್ತಿಪರ ಕೋರ್ಸ್ ಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಸೌಲಭ್ಯ ಒದಗಿಸಲು ಮುಂದುವರಿಯುತ್ತೇವೆ ಎಂದು ಹೇಳಿದರು .
ತಾಲೂಕಿನಲ್ಲಿ 24 ಹಾಸ್ಟೆಲ್ ಗಳ ವ್ಯವಸ್ಥೆ ಇದ್ದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಪದವಿ ಅಭ್ಯಾಸ ಮಾಡುತ್ತಿರುವಾಗಲೇ ಸುಮಾರು 360 ವಿದ್ಯಾರ್ಥಿನಿಯರ ವಿವಾಹ ವಾಗಿದ್ದು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಪೋಷಕರು ಈ ರೀತಿ ಮುಂದುವರಿಯದೆ ಹೆಣ್ಣು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.
40 ಕೋಟಿ ಅಂದಾಜು ವೆಚ್ಚದಲ್ಲಿ ಹರದನಹಳ್ಳಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಹಂತದಲ್ಲಿದೆ. ಜೊತೆಗೆ ವಸತಿ ನಿಲಯಗಳ ಸೌಲಭ್ಯವು ಕೂಡ ಇದ್ದು ಮುಂದಿನ ವರ್ಷ ಕಾಲೇಜು ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಚ್ ಡಿ ರೇವಣ್ಣ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಸಂಚಾಲಕರು ಬೋಧಕ ಬೋಧಕ್ಕೆ ತರ ವರ್ಗ ಪೋಷಕರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಪಡುವಲ ಹಿಪ್ಪೆ ಹೆಚ್ ಡಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ ಡಿ ನಾರಾಯಣ ಅವರು ಮಾತನಾಡಿ ತಾಲೂಕಿನ ಪಡುವಲ ಹಿಪ್ಪೆಯಲ್ಲಿರುವ ಹೆಚ್ ಡಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ನ ನೂತನ ಮೌಲ್ಯಮಾಪನ ಪ್ರಕ್ರಿಯೆಯ ಅಡಿಯಲ್ಲಿ ಕರ್ನಾಟಕದ 100 ಸರ್ಕಾರಿ ಕಾಲೇಜುಗಳಲ್ಲಿ 3 ನೆ ಸ್ಥಾನದಲ್ಲಿದ್ದು ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಗಳಿಸಿದ ಹೆಗ್ಗಳಿಕೆ ನಮ್ಮ ಕಾಲೇಜಾಗಿದೆ ಎಂದು ತಿಳಿಸಿದರು.
ಡಿಸೆಂಬರ್ 14 ಮತ್ತು 15 ರಂದು ನಾಕ್ ಮೌಲ್ಯಮಾಪನ ಸಮಿತಿಯ ಸದಸ್ಯರಾದ ಕುಲಪತಿ ಡಾ. ಪ್ರತಾಪ್ ಸಿಂಹ ಚೌಹಾನ್ ಡಾ. ಮಹಮ್ಮದ್ ಶಫಿ, ಮಥುರಾದಾಸ್ ಮೋಹತ ಡಾ. ಜೀವನ್ ದೋoತುಲ್ವಾರ್ ಸದಸ್ಯತ್ವದ ಮ್ಯಾಕ್ ಮೌಲ್ಯಮಾಪನ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪ್ರಗತಿ ಅಂಶಗಳನ್ನು ಪರಿಶೀಲಿಸಿತು. ಕಾಲೇಜಿನ ಶೈಕ್ಷಣಿಕ ಅಂಶಗಳು ಬೋಧನೆ ಕಲಿಕೆ ಮತ್ತು ಮೌಲ್ಯಮಾಪನ ಸಂಶೋಧನೆ ವಿನೂತತೆ ಮತ್ತು ಹೊರ ಸಂಪರ್ಕ ಕಾಲೇಜಿನಲ್ಲಿ ಇರುವ ಆಂತರಿಕ ರಚನೆ ಮತ್ತು ಕಲಿಕಾ ಸಂಪನ್ಮೂಲಗಳು ವಿದ್ಯಾರ್ಥಿಗಳಿರುವ ಬೆಂಬಲ ಮತ್ತು ಪ್ರಗತಿ ಆಡಳಿತ ನಾಯಕತ್ವ ಮತ್ತು ನಿರ್ವಹಣೆ ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ರೂಡಿಗಳು ಇಂಥವುಗಳನ್ನು ತೀಕ್ಷ್ಣವಾಗಿ ಪರಿಶೀಲಿಸಿದ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತು ಎಂದು ತಿಳಿಸಿದರು
ಮೌಲ್ಯಮಾಪನ ಪ್ರಕ್ರಿಯೆ ಅಡಿಯಲ್ಲಿ ನ್ಯಾಕ್ ನಿಂದ 2.96 ಸಿಜಿಪಿಎ ಅಂಕಗಳೊಂದಿಗೆ. B++ ಗ್ರೇಡ್ ಮಾನ್ಯತೆ ಪಡೆದು ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಾಲೇಜಾಗಿದೆ ಎಂದು ನುಡಿದರು.
ಹೆಚ್ ಡಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 750 ವಿದ್ಯಾರ್ಥಿಗಳು ಪ್ರವೇಶ ಪಡೆದು 5 ಸ್ನಾತಕ ಮತ್ತು 5 ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನು ಹೊಂದಿದೆ ನಾನು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯವನ್ನು ಪಡೆದು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಈ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಿಡಿಸಿ ಸದಸ್ಯರಾದ ಹೆಚ್ವಿ ಸುರೇಶ್ ಕುಮಾರ್ ನಿವೃತ್ತ ಪ್ರಾಂಶುಪಾಲ ಪುಟ್ಟ ಸೋಮಪ್ಪ ನಿವೃತ್ತ ಶಿಕ್ಷಕ ಚನ್ನೇಗೌಡ ನಿವೃತ್ತ ಉಪನ್ಯಾಸಕ ಜವರೇಗೌಡ ಮಾಜಿ ಪುರಸಭಾ ಅಧ್ಯಕ್ಷ ಸುದರ್ಶನ್ ಉಪಸ್ಥಿತರಿದ್ದರು.