ಜಿಲ್ಲೆ

ಹೆಣ್ಣು ಅವಮಾನಗಳನ್ನು ಮೆಟ್ಟಿ ನಿಲ್ಲಲಿ

ಕಲಬುರಗಿ: ಮಹಿಳೆಯರ ಸಾಧನೆಯ ಹಾದಿ ಸುಲಭವಾಗಿರುವುದು ಅಲ್ಲ. ನಿತ್ಯ ಹಲವು ಸವಾಲು, ಸಮಸ್ಯೆ, ಸಂಕಷ್ಟಗಳನ್ನು ಎದುರಿಸಿ ಎದೆಗುಂದೆ, ಎಲ್ಲ ಅವಮಾನಗಳನ್ನು ಮೆಟ್ಟಿ ನಿಂತ್ತು ಸಾಧಕಿಯಾಗಿ ಹೊರಬರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸಲಹೆ ನೀಡಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರಲ್ಲಿ ಪ್ರದೇಶ ಕುರುಬಗೊಂಡ ಸಂಘ, ಜಿಲ್ಲಾ ಕುರುಬಗೊಂಡ ನೌಕರರ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಹಳ್ಳಿಯಲ್ಲೂ ನಾಯಕರು ಜನಿಸಬೇಕು. ವಿಶೇಷವಾಗಿ ಮಹಿಳೆಯರಿಗೆ ಎದುರಾಗುವ ಪ್ರತಿ ಹಂತದ ಸೋಲನ್ನು ಸ್ವೀಕರಿಸಿ, ಮುಂದೆ ಸಾಗಬೇಕು ಎಂದರು.

ಗಂಡು ಮಕ್ಕಳ ಸಾಧನೆಗೆ ಯಾವುದೇ ಅಡ್ಡಿ, ಹೆಚ್ಚಿನ ಸಮಸ್ಯೆ ಬರುವುದಿಲ್ಲ. ಆದರೆ ಪ್ರಸ್ತುತ ಯುವಕರು ಮೊಬೈಲ್ ದಾಸರಾಗುತ್ತಿರುವುದು ದುರಂತ. ಮೊಬೈಲ್‌ನ ಸದ್ಬಳಕೆ ಆಗಬೇಕೆ ವಿನಾ, ನಾವು ಅದರ ಗುಲಾಮ ಆಗಬಾರದು ಎಂದು ಹೇಳಿದರು.
ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ವಿನಯ್‌ಕುಮಾರ ಜಿ.ಬಿ. ಮಾತನಾಡಿ, ನಮ್ಮ ಮಕ್ಕಳಲ್ಲಿ ಕುತೂಹಲ, ಕಲಿಯುವ ಆಸಕ್ತಿ ಇರಬೇಕು. ಕುತೂಹಲವೇ ಜ್ಞಾನಕ್ಕೆ ದಾರಿಯಾಗಿದೆ. ಹೊಸ ವಿಷಯ ಅರಿಯಲೂ ಪ್ರೇರಣೆಎ ನೀಡುತ್ತದೆ. ಸದಾ ದೊಡ್ಡ ಕನಸಿನೊಂದಿಗೆ ಜೀವನ ಸಾಗಿಸಬೇಕು. ಮಹಾತ್ವಾಕಾಂಕ್ಷೆ ಇರಬೇಕು. ಕನ್ನಡ, ಇಂಗ್ಲಿಷ್ ಪತ್ರಿಕೆಗಳನ್ನು ನಿತ್ಯ ಓದಿ, ಜ್ಞಾನ ವಿಸ್ತರಿಸಿಕೊಳ್ಳಿ ಎಂದು ಹೇಳಿದರು.
ಮಕ್ಕಳು ಮೃದು ಸ್ವಭಾವದವರಾಗಿದ್ದು, ಪಾಲಕರ ಪ್ರತಿ ನಡೆಯನ್ನು ಅನುಕರಿಸುತ್ತಿದ್ದಾರೆ. ಮನೆಯಲ್ಲಿ ಆಟಿಕೆಗಿಂತ ಹೆಚ್ಚು ಪುಸ್ತಕಗಳು ಇರಬೇಕು. ಆಗ ಮಕ್ಕಳು ಜ್ಞಾನದತ್ತ ಸಾಗುತ್ತಾರೆ. ಶೀಘ್ರದಲ್ಲಿ ಕಲಬುರಗಿಯಲ್ಲೂ ಇನ್‌ಸೈಟ್ಸ್ ಸಂಸ್ಥೆ ಆರಂಭಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ ಮಾತನಾಡಿ, ಜೀವನದಲ್ಲಿ ಸತತ ಪ್ರಯತ್ನ, ಗುರಿ ಇದ್ದರೆ ಮಾತ್ರ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದವರು ಸಾಧನೆಯ ಮೆಟ್ಟಿಲು ಏರಬಹುದು ಎಂದು ಹೇಳಿದರು.
ಇಸ್ರೊ ವಿಜ್ಞಾನಿ ಸತೀಷ ತಂಬ್ರೆ ಪಿಪಿಟಿ ಮೂಲಕ ಉಪನ್ಯಾಸ ನೀಡಿದರು. ತಿಂಥಣಿ ಬ್ರಿಡ್ಜ್ನ ಶ್ರೀ ಲಿಂಗಬೀರದೇವರು, ಬೆಂಗಳೂರಿನ ಶ್ರೀ ಯೋಗೇಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯP್ಷÀ ದೇವಿಂದ್ರಪ್ಪ ಮರತೂರ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಅಧ್ಯP್ಷÀ ಗುರುನಾಥ ಎಸ್.ಪೂಜಾರಿ ಅಧ್ಯP್ಷÀತೆ ವಹಿಸಿದ್ದರು.
ಶಾಲಾ ಶಿP್ಷÀಣ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ಆಕಾಶ ಶಂಕರ ಮಾತನಾಡಿ, ನಾನು ಎರಡು ಬಾರಿ ಐಎಎಸ್ ಫೇಲಾದೆ. ಆದರೆ ಪ್ರಯತ್ನ ಬಿಡಲಿಲ್ಲ. ವಿದ್ಯಾರ್ಥಿ ಸಿದ್ಧವಾಗಿದ್ದರೆ ಶಿಕ್ಷಕ, ಗುರು ದೊರೆಯುತ್ತಾನೆ ಎನ್ನುವಂತೆ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ವಿನಯಕುಮಾರ ನನಗೆ ಗುರುವಾಗಿ ಬಂದರು ಎಂದು ಗುರುಸ್ಮರಣೆ ಮಾಡಿದರು.
ಕುರುಬಗೊಂಡ ನೌಕರರ ಸಂಘದ ಜಿ¯್ಲÁಧ್ಯP್ಷÀ ಯಲಗೊಂಡ ಎಸ್.ಹಿರೇಕುರಬರ, ಪ್ರಮುಖರಾದ ಭಗವಂತರಾವ ಗೌಡ ಪಾಟೀಲ್, ಮಹಾಂತೇಶ ಕೌಲಗಿ, ಪ್ರಭಾವತಿ ಆರ್., ಶಾರದಾ ವೆಂಕಟೇಶ, ಈರಣ್ಣ ಝಳಕಿ, ನಾರಾಯಣಪ್ಪ ಕುರುಬರ, ಮಲ್ಲಿಕಾರ್ಜುನ ಪೂಜಾರಿ, ನಿರ್ಮಲಾ ಬರಗಾಲಿ, ಗಣಪತಿ ಮಿಣಜಗಿ ಇತರರಿದ್ದರು. ಯ¯್ಲÁಲಿಂಗ ಬಬಲಾದಕರ್ ಸ್ವಾಗತಿಸಿದರು. ವಿಶಾಲಾಕ್ಷಿ ಮಾಯಣ್ಣವರ್, ಅರ್ಜುನ ಹತ್ತಿ ನಿರೂಪಣೆ ಮಾಡಿದರು.