ಗದಗ: ಭೂಮಿ ಮತ್ತು ಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕವಿತಾ ದಂಡಿನ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಧನೆಯ ಶಿಖರವೇರಿದ ಸ್ತ್ರೀಕುಲದ ತಿಲಕ ಶರಣೆ ಅಕ್ಕಮಹಾದೇವಿ ಕನ್ನಡದ ಮೊದಲ ಕವಯಿತ್ರಿ ಎಂದು ಖ್ಯಾತಳಾದರು. ಮದರ್ಥೆರೇಸಾ, ಕಿತ್ತೂರರಾಣಿ ಚನ್ನಮ್ಮ, ಇನ್ಪೋಸಿಸ್ನ ಸುಧಾಮೂರ್ತಿ, ಗಗನಯಾನಿ ಕಲ್ಪನಾ ಚಾವ್ಲಾ ಸೇರಿದಂತೆ ಅನೇಕರು ಸಾಧನೆಯ ಶಿಖರವೇರಿದ ಮಹನೀಯರು ಎಂದರು.
ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಮಹಿಳೆಯರು ಸಾವಿತ್ರಿಭಾಯಿ ಫುಲೆ ಅವರ ಆದರ್ಶ ಹಾಗೂ ತತ್ತ್ವಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ರುದ್ರಣ್ಣ ಗುಳಗುಳಿ, ಮಹಿಳೆಯರು ಹಿಂಜರಿಕೆಯ ಮನೋಭಾವ ತೊರೆದು ಮುಂದೆ ಬಂದಾಗ ಅವರಿಗೆ ಸಹಕಾರ ದೊರೆಯಲಿದೆ. ಮಹಿಳೆಯರು ಸಂಕುಚಿತ ಮನೋಭಾವ ತೊರೆದು ಮುನ್ನಡೆಯಬೇಕು ಎಂದರು.
ಎಸ್.ವೈ. ಭಾವಿಕಟ್ಟಿ, ಕಂಠೆಪ್ಪ ಗುಗ್ಗರಿ, ವೆಂಕಟೇಶ ಮೇರವಾಡೆ, ರಾಜೇಶ್ವರಿ ಗುಳಗುಳಿ ಮಾತನಾಡಿದರು.
ಶ್ರೇಯಾ ಚಳ್ಳಮರದ ಅವರಿಂದ ಭರತನಾಟ್ಯ ಹಾಗೂ ಗದಗ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿಯ ಸದಸ್ಯೆಯರಿಂದ ಜನಪದ ನೃತ್ಯ ಜರುಗಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕವಿತಾ ದಂಡಿನ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಶಿಕಲಾ ಹಡಗಲಿಮಠ, ಅಜನೇಶ ಮಾನೆ, ರತ್ನಕ್ಕ ಕಲ್ಲೂರ, ಶಾಂತಕ್ಕ ಇಟಗಿ, ಸುಧಾ ಚಳ್ಳಮರದ, ಸುರೇಶ ಕುಲಕರ್ಣಿ, ಪ್ರಮೋದ ಬೇಲಿ, ಇಂದಿರಾ ಉತ್ತರಕರ, ಲಕ್ಷ್ಮಿ ದೋಟಿಹಾಳ, ಲಕ್ಷ್ಮಿ ಗುರಿಕಾರ, ಮಧು ಕೋಟಿ, ರಂಜನಾ ಕೋಟಿ, ಜ್ಯೋತಿ ದೇಸಾಯಿಪಟ್ಟಿ ಮತ್ತಿತರರು ಇದ್ದರು. ಸುನಂದಾ ಇಟಗಿ ಸ್ವಾಗತಿಸಿದರು. ಶೋಭಾ ಗುಗ್ಗರಿ ನಿರೂಪಿಸಿದರು. ಬಸಮ್ಮ ಹಡಗಲಿ ವಂದಿಸಿದರು.
EndFragment