ಜಿಲ್ಲೆ

ಹೆಡ್‌ಕಾನ್ಸ್‌ಸ್ಟೇಬಲ್ ಹತ್ಯೆ ಖಂಡಿಸಿ ಪ್ರತಿಭಟನೆ


ಚಿತ್ರದುರ್ಗ:ಜೇವರ್ಗಿ ತಾಲೂಕು ಹುಲ್ಲೂರು ಬಳಿ ನಡೆದ ಹೆಡ್‌ಕಾನ್‌ಸ್ಟೇಬಲ್ ಹತ್ಯೆಯನ್ನು ಖಂಡಿಸಿ ಕರುನಾಡು ವಿಜಯ ಸೇನೆ ಕಾರ‌್ಯಕರ್ತರು ಎಸ್‌ಪಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಕರ್ತ್ಯವದಲ್ಲಿದ್ದ ನೆಲೋಗಿ ಠಾಣೆ ಎಚ್‌ಸಿ ಮಯೂರ ಮೇಲೆ ಮರಳು ಮಾಫಿಯಾದ ದುರುಳರು ಟ್ರ್ಯಾಕ್ಟರ್ ಹತ್ತಿಸಿ ಹತ್ಯೆಗೈದಿದ್ದು ದುರಂತ. ಈ ಕೃತ್ಯಕ್ಕೆ ಕಾರಣರಾದ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆ ಆಗುವಂತೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಯೂರ ಅವರ ನೊಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರದೊಂದಿಗೆ ಮನೆ ಹಾಗೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್ ಅವರಿಗೆ ಮನವಿ ಸಲ್ಲಿಸಿದರು.

ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ವೀಣಾಗೌರಣ್ಣ, ಮುಖಂಡರಾದ ಬಂಗಾರಪ್ಪ, ನಾಗರಾಜ್, ಮುತ್ತು, ಮಣಿಕಂಠ, ವಿಶ್ವನಾಥಮೂರ್ತಿ, ಅಖಿಲೇಶ್ ಮತ್ತಿತರರು ಇದ್ದರು.