ಜಿಲ್ಲೆ

ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣದ ಕಾಮಗಾರಿಗೆ ಶಂಕು ಸ್ಥಾಪನೆ

ಹೊಳೆನರಸೀಪುರ : ಗ್ರಾಮೀಣ ಭಾಗದ ಶೈಕ್ಷಣಿಕ ಮಟ್ಟ   ಸುಧಾರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು  ನೀಡುವುದರಿಂದ ವಿದ್ಯಾರ್ಥಿಗಳೇ ಭವಿಷ್ಯದ  ಆಸ್ತಿಗಳಾಗಿ  ಹೊರ ಹೊಮ್ಮುತ್ತಾರೆ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಅಭಿಪ್ರಾಯಪಟ್ಟರು.


ತಾಲೂಕಿನ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯ ನಿಡುವಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಹೆಚ್ಚುವರಿ ಶಾಲಾ-ಕೊಠಡಿ ನಿರ್ಮಾಣದ  ಶಂಕುಸ್ಥಾಪನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.


  ಗ್ರಾಮೀಣ ಭಾಗದ ಶೈಕ್ಷಣಿಕ ವ್ಯವಸ್ಥೆ  ಉತ್ತಮವಾಗಲು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಶ್ರಮವಹಿಸಬೇಕಿದೆ.  ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಯನ್ನು ನೀಡಬೇಕಾದರೆ ವಿದ್ಯಾರ್ಥಿಗಳಿಗೆಗುಣಮಟ್ಟದ ಶಿಕ್ಷಣ ಸೌಲಭ್ಯಗಳನ್ನು ಮತ್ತು ಶಿಕ್ಷಣ ಕಲಿಯುವ ವಾತಾವರಣವನ್ನು ಉನ್ನತೀಕರಿಸಬೇಕು . ಗ್ರಾಮೀಣ ವಿದ್ಯಾರ್ಥಿಗಳು ಸಾಮಾಜಿಕ ,ನೈತಿಕ ಮಟ್ಟದಲ್ಲಿ ಹೆಚ್ಚು ಪ್ರಭುದ್ಧರಾಗಿದ್ದಾರೆ .ಬುದ್ಧಿಯಲ್ಲಿ ಪಟ್ಟಣದ ವಿದ್ಯಾರ್ಥಿಗಳಿಗಿಂತಲೂ ಮುಂದಿರುತ್ತಾರೆ. ಆದರೆ ಸರಿಯಾದ ವ್ಯವಸ್ಥೆಯನ್ನು ಒದಗಿಸದೆ ಶೈಕ್ಷಣಿಕ ಪ್ರಗತಿಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.


ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ಮುಂದುವರಿಯುತ್ತಿದೆ.  ಸರ್ಕಾರಿ ಶಾಲೆಗಳಿದ್ದರೂ  ಖಾಸಗಿ ಶಾಲೆಗಳಿಗೆ ಬಸ್ಸುಗಳಲ್ಲಿ ವಿದ್ಯಾಭ್ಯಾಸ ಮಾಡಲು ಕಳುಹಿಸುತ್ತಾರೆ. ಶಾಲೆಗಳ ಶಿಕ್ಷಣ ಮಟ್ಟ ಸುಧಾರಿಸಲು ಶಿಕ್ಷಕ ವರ್ಗ ತಮ್ಮ ಬುದ್ಧಿಶಕ್ತಿಯನ್ನು  ಬಳಸಬೇಕಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಭಿನ್ನವಾಗಿಲ್ಲ ಎಂಬ ಅಭಿಪ್ರಾಯ ಪೋಷಕರಲ್ಲಿ ಬರುವಂತಹ  ವಾತಾವರಣವನ್ನು ಸರ್ಕಾರಿ ಶಾಲೆಯ ಶಿಕ್ಷಕರು ಮಾಡಬೇಕಿದೆ  ಹಾಗೆಯೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರದ ಗುಣಗಳನ್ನು ಬೆಳೆಸಬೇಕು ಎಂದು ತಿಳಿಸಿದರು


ನನ್ನ ಸ್ವಾರ್ಥಕ್ಕಾಗಿ ರಾಜಕಾರಣ  ಮಾಡುತ್ತಿರುವುದಿಲ್ಲ ಸಾರ್ವಜನಿಕರ ಸೇವೆ ಎಂದು ನಡೆಯುತ್ತಿದ್ದೇನೆ ನನ್ನ ಕ್ಷೇತ್ರದಲ್ಲಿ ಧಕ್ಕೆ ಯಾಗದ ರೀತಿಯಲ್ಲಿ ಪ್ರಾಮಾಣಿಕ ಆಡಳಿತ ನಡೆಸಿದ್ದೇನೆ ಮುಂದೆಯೂ ಇದೇ ರೀತಿ   ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು


ಹಳ್ಳಿ ಮೈಸೂರು ಹೋಬಳಿಯ ಕುರಿ ಕಾವಲು ಬಡಕ್ಯಾತನಹಳ್ಳಿ ಸೋಮನಹಳ್ಳಿ ಗುಡ್ಡೇನಹಳ್ಳಿ ಜಾಕನಹಳ್ಳಿ ಹಾಡ್ಯ  ಈ ಗ್ರಾಮಗಳಿಗೆ 406. 11 ಲಕ್ಷದ ವೆಚ್ಚದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅಡಿ ಮ ನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ  ಒದಗಿಸುವ ಕಾಮಗಾರಿಗೆ  ಚಾಲನೆ ನೀಡಿದರು ನಿಡುವಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ 32.80  ಸಾವಿರ  ವೆಚ್ಚದಲ್ಲಿ ಎರಡು ಹೆಚ್ಚುವರಿ ಶಾಲಾ ಕೊಠಡಿ, ಜೋಡಿಗುಬ್ಬಿ , ಮಂಗಳವಾಡಿ, ಜಾಕನಹಳ್ಳಿ ಗ್ರಾಮ ಗಳಿಗೆ ತಲಾ ಒಂದು ಹೆಚ್ಚುವರಿ  ಶಾಲಾ ಕೊಠಡಿಗಳಿಗೆ  74. 50, ಲಕ್ಷ  ಹಾಗೂ 10 ಲಕ್ಷ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರ್ವೇರಿಸಿದ್ರು. ಶಾಲಾ ಕಟ್ಟಡ ನಿರ್ಮಾಣದ ಹಂತದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹೆಚ್ಚು ಗಮನಹರಿಸಿ ಕಟ್ಟಡ ನಿರ್ಮಿಸಿಕೊಳ್ಳಬೇಕು ಇದನ್ನು ನಿರ್ವಹಿಸುವಂತೆ ನೋಟಿಸ್ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚಿಸಿದರು ಕಳಪೆ ಕಾಮಗಾರಿ ನಡೆದು ಕಂಡು ಬಂದರೆ ಶಿಕ್ಷಕರ ಸಂಬಳದಲ್ಲಿ ದುರಸ್ತಿ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು ನೀವು ಜವಾಬ್ದಾರಿಯಿಂದ   ನುಣುಚಿಕೊಳ್ಳಬಾರದು ಎಂಬ ದೃಷ್ಟಿಯಿಂದ ಈ ಸೂಚನೆ ನೀಡಿದ್ದೇನೆ. ನಿಮ್ಮ ಸ್ವಂತ ಕಟ್ಟಡದಂತೆ ಶಾಲಾ  ಕಟ್ಟಡವನ್ನು ಗುತ್ತಿಗೆದಾರರಿಂದ ನಿರ್ಮಾಣ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ  ಸಮಿತಿ ಅಧ್ಯಕ್ಷ ಮಹಾದೇವಪ್ಪ ಗ್ರಾಮ ಪಂಚಾಯಿತಿ ಸದಸ್ಯ ಕವಿತಾ ,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ್,  ಜಿಲ್ಲಾ ಪಂಚಾಯತ್ ಪ್ರಶಾಂತ್, ಮಾಜಿ ತಾಪಂ  ಅಧ್ಯಕ್ಷ ಬಸವರಾಜು ,ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ,ಶಾಲೆಯ ಮುಖ್ಯ ಶಿಕ್ಷಕಿ  ಜಬೀನಬೇಗಮ್ ಮತ್ತಿತರರು ಉಪಸ್ಥಿತರಿದ್ದರು