ಜಿಲ್ಲೆ

ಹೆಚ್ಚುವರಿ ವಿದ್ಯುತ್ ವಿತರಣಾ ಘಟಕ ನಿರ್ಮಿಸುವಂತೆ ಒತ್ತಾಯ

ಆಲೂರು : ತಾಲೂಕಿನಲ್ಲಿ ಹೆಚ್ಚುವರಿ ವಿದ್ಯುತ್ ವಿತರಣಾ ಘಟಕ ನಿರ್ಮಿಸುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಹಾಗೂ ವಿದ್ಯುತ್ ಗುತ್ತಿಗೆದಾರ ಸಂಘದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿದರು.ತಪ್ಪಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶಾಸಕಗರಿಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಲೂರು-ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ನಾಗರಾಜ್ ಹುಲ್ಲಹಳ್ಳಿ, ತಾಲೂಕಿನಲ್ಲಿ ವಿದ್ಯುತ್ ವಿತರಣಾ ಘಟಕದ ನಿರ್ಮಾಣ ಮಾಡಲು ರೈತರು ನೀಡಿರುವ ಜಾಗಕ್ಕೆ ಸರಿಯಾದ ದರ ನೀಡಲು ಆಗದೆ ಹಾಗೂ ಸರ್ಕಾರಿ ಜಾಗ ನಿಯೋಜನೆ ಮಾಡವುದರಲ್ಲೂ ವಿಫಲವಾಗಿದೆ ಕ್ಷೇತ್ರದ ಶಾಸಕರು ಸುಮಾರು ಮೂರು ಭಾರಿ ಶಾಸಕರಾಗಿದ್ದರೂ ಕೂಡ ಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ತಾಲೂಕಿನಲ್ಲಿ ಕೇವಲ ಮಗ್ಗೆ ಗ್ರಾಮದಲ್ಲಿ ಒಂದೆ ಒಂದು ವಿದ್ಯುತ್ ವಿತರಣಾ ಘಟಕವಿದ್ದು ಬೇಸಿಗೆಯಲ್ಲಿ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರೂ ಶಾಸಕರು ಇದುವರೆವಿಗೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಮತ ನೀಡಿದ ಜನರನ್ನ ಬೀದಿಯಲ್ಲಿ ನಿಲ್ಲಿಸಿದ್ದಾರೆ ವಿಧಾನ ಸಭೆಯಲ್ಲಿ ಇದುವರೆಗೂ ಪ್ರಶ್ನಿಸಿಲ್ಲ ಶಾಸಕ ಕುಮಾರಸ್ವಾಮಿಯರು ತಕ್ಷಣ ಕ್ರಮ ತಗೆದುಕೊಂಡು ತ್ವರಿತವಾಗಿ ಪರಿಹಾರ ನೀಡಲು ಮುಂದಾಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಶಾಸಕರಿಗೆ ಎಚ್ಚರಿಕೆ ನೀಡಿದರು.

ಆಲೂರು ಕಟ್ಟಾಯ ಮಂಡಲದ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕಟ್ಟೆಪುರ ಮಾತನಾಡಿ, ತಾಲೂಕಿನಾದ್ಯಂತ ನಾಲ್ಕು ಹೋಬಳಿಗಳಿವೆ ಆದರೆ ಕೇವಲ ಒಂದು ವಿದ್ಯುತ್ ವಿತರಣಾ ಘಟಕ ಇದೆ ,ವಿದ್ಯುತ್ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಅಪಾರ ನಷ್ಟ ಅನುಭವಿಸುತ್ತಿದ್ದಾರೆ ಕಸಬಾ ಹೋಬಳಿ ಕೊಡಗಿಹಳ್ಳಿ ಗ್ರಾಮದ ಶಿವರುದ್ರಪ್ಪ ಅವರು ತಮ್ಮ ಒಂದು ಎಕರೆ ಹತ್ತು ಗುಂಟೆ ಜಮೀನನ್ನು ಕೊಡಲು ಸಿದ್ದರಿದ್ದು ಸರಿಯಾದ ನಿಗದಿ ಬೇಲೆ ಕೊಟ್ಟು ಖರೀದಿಸಲು ಶಾಸಕರು ವಿಫಲರಾಗಿದ್ದಾರೆ. ಜನರ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲ ನೊಂದ ರೈತರು ಶಾಸಕರಿಗೆ ಶಾಪ ಹಾಕುತ್ತಿದ್ದಾರೆ. ತಾಲೂಕಿನ್ನು ಪರಿಗಣಿಸುತ್ತಿರುವ ಶಾಸಕ ಕುಮಾರಸ್ವಾಮಿಯವರಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನ ಪಾಠ ಕಲಿಸಲಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇದೇ ಸಂಧರ್ಭದಲ್ಲಿ ಪಟ್ಟಣ ಪಂಚಾಯತಿ ನಾಮ ನಿರ್ದೇಶನ ಸದಸ್ಯ ರಮೇಶ್, ಕ್ಯಾಂಟೀನ್ ನಾಗರಾಜ್, ಬಿಜೆಪಿ ರೈತ ಮೋರ್ಚಾದ ಖಂಡರುಗಳಾದ ಮಹೇಶ್, ಸಂಜು, ವಿನಯ್ ಮುಂತಾದವರು ಭಾಗವಹಿಸಿದ್ದರು.