ಜಿಲ್ಲೆ

ಹೆಚ್ಚುವರಿ ಬಸ್‌ಗಳಿಗಷ್ಟೇ ಕೋರಿಕೆ

ಚಾಮರಾಜನಗರ: ಕೇರಳದವರು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಸ್ತೆಯಲ್ಲಿ ರಾತ್ರಿ ವೇಳೆ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕೆಂದಷ್ಟೇ ಕೇಳಿಕೊಂಡಿದ್ದಾರೆ ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಂಡೀಪುರದಲ್ಲಿ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ತೆರವು ಮಾಡಲ್ಲ. ಇದರ ಬಗ್ಗೆ ಎಲ್ಲಿಯೂ ಪ್ರಸ್ತಾಪವೂ ಇಲ್ಲ. ಕೇರಳದಿಂದ ಹಿಂದಿನಿಂದಲ್ಲೂ ರಸ್ತೆ ಸಂಚಾರಕ್ಕೆ ಅನುವು ಮಾಡಿ ಎಂಬ ಒತ್ತಡವಿದೆ. ಈಗ ಅವರು ಸಂಪೂರ್ಣ ರಸ್ತೆ ಸಂಚಾರ ತೆರವಿಗೆ ಮನವಿ ಮಾಡಿಲ್ಲ. ರಾತ್ರಿ ವೇಳೆ ಸಂಚರಿಸುವ ನಾಲ್ಕು ಬಸ್‌ಗಳನ್ನು ಹೆಚ್ಚು ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಅದಕ್ಕೂ ಸಹ ಈಗ ಒಪ್ಪಿಗೆ ಕೊಟ್ಟಿಲ್ಲ, ಇರುವ ಬಸ್‌ಗಳಿಗೆ ಜನರು ಎಲ್ಲ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ರಾತ್ರಿ ರಸ್ತೆ ಸಂಚಾರ ತೆರವು ಮಾಡೋಲ್ಲ ಎಂದರು.