ಮಾಂಜರಿ: ಹೆಚ್ಚು ಇಳುವರಿಯಿಂದ ರೈತರಿಗೆ ಹಾಗೂ ಕಾರ್ಖಾನೆಗೆ ಲಾಭವಾಗುತ್ತದೆ. ಹಾಗಾಗಿ ಎಲ್ಲ ಸದಸ್ಯರು ಕಾರ್ಖಾನೆಯ ಕಬ್ಬು ಅಭಿವೃದ್ಧಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ ಹೇಳಿದರು.
ಸಮೀಪದ ಬೇಡಕಿಹಾಳ ಗ್ರಾಮದ ಶ್ರೀ ಚಂದ್ರಕಾಂತ ಅಬಾಸೋ ಚವ್ಹಾಣ ಜಮೀನಿನಲ್ಲಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಕಾರ್ಖಾನೆ ಹಾಗೂ ಯುಪಿಎಲ್ ಕಂಪನಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೆಚ್ಚು ಕಬ್ಬು ಬೆಳೆಯುವ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ನವದೆಹಲಿ ನಿರ್ದೇಶಕ ಅಮಿತ್ ಕೋರೆ ಹಾಗೂ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ನಿರ್ದೇಶನದಂತೆ ಕಬ್ಬು ಅಭಿವೃದ್ಧಿ ಯೋಜನೆಗೆ ಒತ್ತು ನೀಡಿ, ಎಕರೆಗೆ ೧೦೦ ಟನ್ ಕಬ್ಬು ಇಳುವರಿಗೆ ಉತ್ತೇಜಿಸಲಾಗುತ್ತಿದೆ. ರೈತರು ಹೆಚ್ಚು ಇಳುವರಿ ಕಬ್ಬು ಪಡೆಯಲು ಏನು ಮಾಡಬೇಕು ಎಂದು ತಿಳಿಸಿದರು.
ಕರಣ ಬಿರಾದರ ಯುಪಿಎಲ್ ಉತ್ಪನ್ನಗಳ ಮಾಹಿತಿ ನೀಡಿದರು. ಕಾರ್ಖಾನೆ ಕಬ್ಬು ಅಭಿವೃದ್ಧಿ ಮೇಲ್ವಿಚಾರಕ ಸಚಿನ ಮೋಪಗಾರ, ಕಬ್ಬು ಮೇಲ್ವಿಚಾರಕರಾದ ಉದಯ ಕಾಗಲೆ, ಸಿಬ್ಬಂದಿಗಳಾದ ಮಲಗೌಡ ಪಾಟೀಲ, ಅಮಿತ್ ಖೋತ, ಅಣ್ಣಾಸಾಹೇಬ ಭಂಡವಾಡೆ, ರಾಜಕುಮಾರ ಖೋತ, ಕುಮಾರ ಹೇರಗೆ, ಪದ್ಮಾಕರ ಖೋತ, ಬಾಬಾಸಾಹೇಬ ಹನಿಮನಾಳೆ ಇತರರಿದ್ದರು.