ಜಿಲ್ಲೆ

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ಚಿತ್ರದುರ್ಗ: ನಗರದಲ್ಲಿ ನ.30ರಂದು ಆಯೋಜಿಸಿರುವ ಕನಕ ಜಯಂತಿ ಸಮಾರಂಭದಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕು ರುಬರ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ,ನಗರಸಭೆ ಸದಸ್ಯೆ ಮೀನಾಕ್ಷಿ ಮನವಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ನಗರದಲ್ಲಿ ನಡೆಯಲಿರುವ ಕನಕದಾಸರ ಭಾವಚಿ ತ್ರದ ಮೆರವಣಿಗೆಯಲ್ಲಿ ಸಮಾಜದ ಎಲ್ಲ ಮಹಿಳೆಯರು ಸಕ್ರಿಯವಾಗಿ ಮೆರವಣಿಗೆ ಮತ್ತು ಸಮಾರಂಭದಲ್ಲಿ ಭಾಗವಹಿಸ ಬೇಕೆಂದು ಮನವಿ ಮಾಡಿದರು. ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗ ಬೇಕಿದೆ ಎಂದರು. ಸರೋಜಾ, ಶಾಂತಾ, ಶೋಭಾ, ನಾಗೇಶ್, ನಾಗಭೂಷಣ್, ಲೀಲಾವತಿ ಇತರರು ಇದ್ದರು.