ಜಿಲ್ಲೆ

ಹೆಂಡತಿಗೆ ಹೊಡೆದ ಪತಿಗೆ ೫ ವರ್ಷ ಜೈಲು ಶಿಕ್ಷೆ

ಬಾಗಲಕೋಟೆ: ತನ್ನ ವಿಲಾಸಿ ಜೀವನಕ್ಕೆ ಹಣ ನೀಡುವಂತೆ ಹೆಂಡತಿಗೆ ಹೊಡಿಬಡಿ ಮಾಡಿದ ಪತಿಗೆ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ೫ ವರ್ಷ ಜೈಲು ಶಿಕ್ಷೆ, ೨೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದ ತಿರುಪತಿಗೌಡ ಗೋವಿಂದಗೌಡ ಪಾಟೀಲ ಶಿಕ್ಷಗೆ ಗುರಿಯಾದ ಅಪರಾಽ. ೨೦೧೯ ಮೇ ೧೭ ರಂದು ಹೆಂಡತಿ ಹೊಡೆದಿರುವ ಘಟನೆ ನಡೆದಿತ್ತು. ಈ ಬಗ್ಗೆ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಎಸ್.ವೈ.ಲೋಹ ನಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ೫ ವರ್ಷ ಜೈಲು ಶಿಕ್ಷೆ, ೨೦ ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಅಭಿಯೋಜಕ ವಿ.ಜಿ.ಹೆಬಸೂರ ಸರ್ಕಾರದ ಪರವಾಗಿ ಮಂಡಿಸಿದ್ದರು