ಜಿಲ್ಲೆ

ಹೃದ್ರೋಗಕ್ಕೆ ಪುನಃಶ್ಚೇತನ ಕೇಂದ್ರ

ಕಲಬುರಗಿ: ಹೃದ್ರೋಗದಿಂದ ಬಳಲುತ್ತಿರುವ ಮತ್ತು ಶಸ್ತ್ರ ಚಿಕಿತ್ಸೆ ನಂತರವೂ ಹೃದಯದ ಆರೋಗ್ಯವನ್ನು ಕಾಪಾಡಲು ಪುನ@ಶ್ಚೇತನ ಕೇಂದ್ರವನ್ನು ಉತ್ತರ ರ‍್ನಾಟಕದಲ್ಲೇ ಪ್ರಥಮ ಬಾರಿಗೆ ಲ್​ೈ ಸಂಸ್ಥೆಯೊಂದಿಗೆ ನಗರದ ಹೀರಾಪುರ ಕರ‍್ಡಿಯಾಕ್​ ರಿಯಾಬಿಲಿಟೇಷನ್​ ಸೆಂಟರ್​ನಲ್ಲಿ ಆರಂಭಿಸಲಾಗುತ್ತಿದೆ ಎಂದು ಹೃದ್ರೋಗ ವೈದ್ಯ ಡಾ.ಈರಣ್ಣ ಹೀರಾಪುರ ತಿಳಿಸಿದರು.

ಈ ಕೇಂದ್ರವೂ ಹೃದ್ರೋಗಿಯ ವೈಯಕ್ತಿಕ ಮೇಲ್ವಿಚಾರಣೆ ನಿರಂತರವಾಗಿ ಮಾಡಲಿದೆ. ಆಹಾರ, ವ್ಯಾಯಾಮ, ಒತ್ತಡ ನಿಯಂತ್ರಣ, ದುರಾಭ್ಯಾಸಕ್ಕೆ ಕಡಿವಾಣ ಹಾಕಿ, ಹೃದಯದ ಆರೈಕೆಗೆ ಸದಾ ನಿಗಾ ಇಡಲಿದೆ. ಕೇಂದ್ರಕ್ಕೆ ಭೇಟಿ ಆಗದಿರುವವರಿಗೆ ಲ್​ೈ ಸಂಸ್ಥೆಯ ಆ್ಯಪ್​ ಮೂಲಕ ನಿಯಂತ್ರಣ, ತಪಾಸಣೆ, ಸಲಹೆ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಗ ನಿಯಂತ್ರಣ ಮತ್ತು ಬಾರದಂತೆ ತಡೆಯಲು ಈ ಕೇಂದ್ರ ಪೂರಕವಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾಗ ಅಪಾಯಗಳನ್ನು ತಡೆಯಬಹುದಾಗಿದೆ. ಬಿಪಿ, ಕೊಲೆಸ್ಟ್ರಾಲ್​, ಎಚ್​ಬಿಎ ೧ಸಿ ಮತ್ತು ಒಟ್ಟಾರೆ ಯೋಗಕ್ಷೇಮ ನೋಡಿಕೊಳ್ಳಲಾಗುತ್ತದೆ. ವಿಶೇಷ ಕಿಟ್​ಗಳನ್ನು ವಿತರಿಸಲಾಗುತ್ತದೆ. ದರ‍್ಕಾಲದ ಚಿಕಿತ್ಸಾ ಪದ್ಧತಿ ಇದಾಗಿದೆ ಎಂದು ಹೇಳಿದರು.

ಮೆಟ್ರೋ ಸಿಟಿಗಳಲ್ಲಿ ಇಂತಹ ಕೇಂದ್ರಗಳಿದ್ದು, ನಮ್ಮ ಭಾಗದ ಜನರಿಗೆ ಚಿಕಿತ್ಸೆ ನೀಡಲು ಇದು ಪೂರಕವಾಗಲಿದೆ. ಹೃದ್ರೋಗ ಸಮಸ್ಯೆ ಎದುರಾಗದಂತೆ, ಎದುರಾದ ಸಮಸ್ಯೆ ನಿಯಂತ್ರಿಸಲು ಈ ಪುನ@ಶ್ಚೇತನ ಕೇಂದ್ರ ಕೆಲಸ ಮಾಡಲಿದೆ ಎಂದರು.

ಲ್​ೈ ಸಂಸ್ಥೆಯ ಜಯದೀಪ, ಶ್ರೀಧರ, ಸ್ಫರ‍್ತಿ ಇದ್ದರು.