ಜಿಲ್ಲೆ

ಹೃದಯಾಘಾತದಿಂದ ಸೈನಿಕ ಸಾವು

ಸೋಮವಾರಪೇಟೆ: ಕೊಡಗು ಮೂಲದ ಸೈನಿಕರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಉತ್ತರಾಖಂಡದ ಜೋಷಿಮತ್ತ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ನಾಪಂಡ ದಿ.ಚಂಗಪ್ಪ ಎಂಬುವರ ಪುತ್ರ ಎನ್.ಸಿ.ಮಹೇಶ್(46) ಮೃತರು. ಭಾರತೀಯ ಭೂ ಸೇನೆಯ ಇಎಂಇ (ಇಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕಾನಿಕಲ್ ಇಂಜಿನಿಯರ್ಸ್‌) ವಿಭಾಗದಲ್ಲಿ ಜೆಸಿಒ ಹುದ್ದೆಯಲ್ಲಿದ್ದರು. ಕಳೆದ ತಿಂಗಳು ಊರಿಗೆ ಬಂದು ವಾಪಸಾಗಿದ್ದರು. ಇನ್ನು 4 ವರ್ಷದಲ್ಲಿ ನಿವೃತ್ತಿ ಹೊಂದಲಿದ್ದರು. ಅವರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.


1999ರಲ್ಲಿ ಸೇನೆಗೆ ಸೇರ್ಪಡೆಗೊಂಡ ಅವರು, ಹೈದರಾಬಾದ್, ಬೆಂಗಳೂರು, ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ, ಇದೀಗ ಉತ್ತರಾಖಂಡದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ನಂತರ ಮಧ್ಯಾಹ್ನ 12.30ಕ್ಕೆ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಸೇನಾ ಕಚೇರಿಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇಡೀ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪಾರ್ಥಿವ ಶರೀರ ಗುರುವಾರ ಗ್ರಾಮಕ್ಕೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.