ಬುಕ್ಕಾಪಟ್ಟಣ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಜಾವಗಲ್ ಹೋಬಳಿ ಸಿಂಗಟಗೆರೆ ಗ್ರಾಮದ ನಿವಾಸಿ, ಗಸ್ತು ವನಪಾಲಕ ನವೀನ್ ಕುಮಾರ್ (31) ಹೃದಯಾಘಾತದಿಂದ ಬುಧವಾರ ನಿಧನರಾದರು. ಶಿರಾ ತಾಲೂಕು ಬುಕ್ಕಾಪಟ್ಟಣ ಅರಣ್ಯ ವಲಯ ದಸೂಡಿ ಗಸ್ತು ವನಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಬುಧವಾರ ಬೆಳಗ್ಗೆ ಕರ್ತವ್ಯಕ್ಕೆ ಹೊರಡುವ ಸಮಯದಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ತುಮಕೂರಿನಲ್ಲಿ ಮರಣೋತ್ತರ ಪರೀೆ ನಡೆಸಿದ ನಂತರ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಸ್ವಗ್ರಾಮ ಸಿಂಗಟಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಗೌರವ ಸಲ್ಲಿಸಿದರು.5 ವರ್ಷಗಳಿಂದ ಸಕಲೇಶಪುರ ತಾಲೂಕು ಯಶಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ನವೀನ್ ಕುಮಾರ್ ಅವರ ಕರ್ತವ್ಯ ನಿಷ್ಠೆಗೆ ಸಿಂಗಲ್ ಸ್ಟಾರ್ ದೊರೆತಿತ್ತು. ಯಸಳೂರಿನಲ್ಲಿ ಐದು ವರ್ಷ ಕರ್ತವ್ಯ ಮುಗಿಸಿ ಆರು ತಿಂಗಳ ಹಿಂದೆ ತುಮಕೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು.