ಜಿಲ್ಲೆ

ಹೃದಯಾಘಾತದಿಂದ ಯೋಧ ಸಾವು

ಹೃದಯಾಘಾತದಿಂದ ಯೋಧ ಸಾವು

ಚಿಕ್ಕೋಡಿ: ಕೇವಲ ೧೫ ತಿಂಗಳ ಹಿಂದಷ್ಟೇ ನೇಮಕಗೊಂಡು ಅಗ್ನಿವೀರನಾಗಿ ಪಂಜಾಬನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಯೋಧ ಕಿರಣರಾಜ ಕೇದಾರ ತೆಲಸಂಗ (೨೩) ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸೈನಿಕನ ಪಾರ್ಥಿವ ಶರೀರವು ಪಂಜಾಬ್‌ ನಿಂದ ಬುಧವಾರ ಸಂಜೆ ಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ, ಕಿರಣರಾಜ್ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ದೇಶ ರಕ್ಷಣೆ ವೇಳೆ ಪ್ರಾಣತೆತ್ತ ಯೋಧನಿಗೆ ಗೌರವ ಸಲ್ಲಿಸಲು ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದಾರೆ.

ಪಂಜಾಬ್‌ನಿAದ ಪಾರ್ಥಿವ ಶರೀರ ಆಗಮನ:

ದೇಶ ಸೇವೆಯ ಕನಸು ಹೊತ್ತಿದ್ದ ಕಿರಣರಾಜ ೧೫ ತಿಂಗಳ ಹಿಂದಷ್ಟೆ ಭಾರತೀಯ ಸೇನೆಗೆ ಸೇರಿದ್ದರು. ೫ ತಿಂಗಳ ಹಿಂದೆ ರಜೆ ಮೇಲೆ  ಗ್ರಾಮಕ್ಕೆ ಬಂದು ಮತ್ತೆ ಕರ್ತವ್ಯಕ್ಕೆ ಮರಳಿದ್ದರು. ಈಗ ಅವರ ನಿಧನದ ಸುದ್ದಿ ಗ್ರಾಮಕ್ಕೆ ಆಘಾತವನ್ನುಂಟು ಮಾಡಿದೆ. ಮನೆ ಹಾಗೂ ಸಂಬAಧಿಕರ ಆಕ್ರದಂನ ಮುಗಿಲು ಮುಟ್ಟಿದೆ.