ಜಿಲ್ಲೆ

ಹೃದಯಾಘಾತದಿಂದ ತಾಯಿ, ಮಗ ಸಾವು

Belagavi

ಎಚ್​.ಡಿ.ಕೋಟೆ: ತಾಯಿ ಪಾರ್ಶ್ವವಾಯುಗೀಡಾದ ಸುದ್ದಿ ಕೇಳಿ ಮಗ ಹೃದಯಾಘಾತದಿಂದ ಮೃತಪಟ್ಟರೆ, ಮಗ ಸತ್ತ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವಿಗೀಡಾದರು. ಪಟ್ಟಣದ ಸಿದ್ದಪ್ಪಾಜಿ ರಸ್ತೆ ನಿವಾಸಿ ಗೋಪಾಲಯ್ಯ ಅವರ ಪತ್ನಿ ಸಣ್ಣಮಂಚಮ್ಮ(58), ಇವರ ಪುತ್ರ ಕೃಷ್ಣ (45) ಮೃತರು. ಎಚ್​.ಡಿ. ಕೋಟೆ ಪಟ್ಟಣದ ಸೇಂಟ್​ ಮೇರಿಸ್​ ಆಸ್ಪತ್ರೆ ಮುಂಭಾಗ ಕೃಷ್ಣ ಅವರು ಟೀ ಅಂಗಡಿ ನಡೆಸುತ್ತಿದ್ದರು. ಜತೆಗೆ ಆಟೋಚಾಲಕರೂ ಆಗಿದ್ದರು.

ಕೃಷ್ಣ ಅವರ ತಾಯಿ ಸಣ್ಣಮಂಚಮ್ಮ ಭಾನುವಾರ ಪಾರ್ಶ್ವವಾಯುಗೆ ತುತ್ತಾಗಿದ್ದರು. ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲು ಮಾಡಿ, ಈ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ. ವಿಚಾರ ಕೇಳಿದ ಕೃಷ್ಣ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದರು.

ತಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಮಗ ಮೃತಪಟ್ಟ ವಿಷಯವನ್ನು ತಾಯಿಗೆ ತಿಳಿಸಿದಾಗ ಅವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.