ಎಂ.ಎನ್.ಕೋಟೆ: ಸಂಬಂಧಿಗಳ ವಿರೋಧದ ನಡುವೆ ಪ್ರೀತಿಸಿದ ಹುಡುಗಿಯನ್ನು 22 ದಿನಗಳ ಹಿಂದೆ ಮದುವೆಯಾಗಿದ್ದ ಗುಬ್ಬಿ ತಾಲೂಕಿನ ಹೊಸಕೆರೆ ಸಮೀಪದ ಅರೇಹಳ್ಳಿಯ ನವವಿವಾಹಿತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಅರೇಹಳ್ಳಿಯ ನಿವಾಸಿ ಸಿದ್ದೇಶ್( 23) ಮೃತ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸ್ನೇಹಿತನ ಅಕ್ಕನ ಮನೆಗೆ ಊಟಕ್ಕೆ ಹೋಗಿ ಬರುವಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಸಿದ್ದೇಶ್ ನಿಟ್ಟೂರು ಹೋಬಳಿಯ ಯುವತಿಯನ್ನು ಪ್ರೀತಿಸಿ, ಸಂಬಂಧಿಗಳ ವಿರೋಧದ ನಡುವೆ ಗುಬ್ಬಿ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಪ್ರೇಮ ವಿವಾಹ ಆಗಿದ್ದ. ಪ್ರೇಮಿಯ ಬಾಳಲ್ಲಿ ಹೃದಯಾಘಾತ ಯಮನಾಗಿ ಬಂದಿದ್ದು, ಸಿದ್ದೇಶ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿರಿಸಿದ ಸಿದ್ದೇಶ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.