ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ 78ನೇ ಸ್ವಾತಂತ್ರೊÈÃತ್ಸವ ನಿಮಿತ್ತ ಆಯೋಜಿಸಿದ್ದ ಸಮಾರಂಭವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಶಿವಶರಣಯ್ಯ ಕಂಬಳಿಮಠ, ಐ.ಜಿ.ಮಠಪತಿ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಬಸವಣ್ಣಪ್ಪ ಗಿಲಕಿ, ಡಾ.ರಾಜಶೇಖರ ಮದರಿ, ಅಪ್ಪಣ್ಣ ಜನವಾಡ, ವಿಠ್ಠಲ್ ಹೂಗಾರ ಇದ್ದರು. 
ಜಿಲ್ಲೆ

ಹೃದಯದ ಪ್ರತಿ ಬಡಿತ ದೇಶಕ್ಕಾಗಿ ಮಿಡಿಯಲಿ

ಬಸವಕಲ್ಯಾಣ: ಭಾರತ ಪ್ರಣತಿಯಲ್ಲಿ ಅಪ್ಪಟ ರಾಷ್ಟç ಪ್ರೇಮದ ತೈಲ ಸುರಿಯುತ್ತಾ ಸ್ವಾತಂತ್ರÈದ ನಂದಾದೀಪ ವಿಶ್ವರೂಪವಾಗಿ ಸದಾ ಬೆಳಗುವಂತೆ ಸರ್ವರೂ ಪ್ರಯತ್ನಶೀಲರಾಗಬೇಕಿರುವುದು ಅತ್ಯಂತ ಅವಶ್ಯ ಎಂದು ಹಾರಕೂಡದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಸಂಸ್ಥಾನ ಸಂಚಾಲಿತ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ 78ನೇ ಸ್ವಾತಂತ್ರೊÈÃತ್ಸವ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅಸಂಖ್ಯಾತ ರಾಷ್ಟç ಭಕ್ತರ ತ್ಯಾಗ ಮತ್ತು ಬಲಿದಾನಗಳಿಂದ ದೀರ್ಘಕಾಲದ ನಿರಂತರ ಹೋರಾಟದಿಂದ ದೊರೆತ ಸ್ವಾತಂತ್ರö್ಯದ ರಥ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಎಲ್ಲರೂ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಸ್ವಾತಂತ್ರö್ಯವೆAಬುದು ಪ್ರತಿ ಭಾರತೀಯನ ಆತ್ಮವಿದ್ದಂತೆ, ಹೃದಯದ ಪ್ರತಿ ಬಡಿತವು ದೇಶಕ್ಕಾಗಿ ಮಿಡಿಯಬೇಕು. ನಮ್ಮ ರಾಷ್ಟç ನಾಯಕರ ಆದರ್ಶ ಪರಂಪರೆಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಶಿವಶರಣಯ್ಯ ಕಂಬಳಿಮಠ, ವಿಜಯಕುಮಾರ ಸಂಗೋಳಗೆ, ಪಂಡಿತರಾವ ದೇಗಾಂವ, ಬಸವಣ್ಣಪ್ಪ ಗಿಲಕಿ, ಡಾ.ರಾಜಶೇಖರ ಮದರಿ, ಹೂಗಾರ ಸಮಾಜದ ತಾಲೂಕು ಅಧ್ಯಕ್ಷ ವಿಠ್ಠಲ್ ಹೂಗಾರ, ಆಡಳಿತ ಅಧಿಕಾರಿ ಐ.ಜಿ, ಮಠಪತಿ, ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ಇತರರಿದ್ದರು.
ಪಂಡಿತ ಪೂಜಾರಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಶಿವಾನಂದ ಪೂಜಾರಿ ವಂದಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಮತ್ತು ಶರಣಪ್ಪ ಸುಂಠಾಣ ಸಂಗೀತ ಸೇವೆ ಸಲ್ಲಿಸಿದರು. ಶಾಲೆಯ ಮಕ್ಕಳು ಭಾಷÀಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.