ಬಣಕಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಬೆಟ್ಟಗೆರೆ ಗ್ರಾಪಂ ಅಧ್ಯಕ್ಷ ಬಿ.ಕೆ.ದಿನೇಶ್ ಉದ್ಘಾಟಿಸಿದರು. ಜಿ.ಎಚ್.ಶ್ರೀನಿವಾಸ್, ಬಿ.ಕೆ.ಲೋಕೇಶ್, ಹೊರಟ್ಟಿ ರಘು, ಮಂಜುನಾಥ ರಾಥೋಡ್ ಇತರರಿದ್ದರು. 
ಜಿಲ್ಲೆ

ಹೃದಯ ಶ್ರೀಮಂತಿಕೆ ಭಾಷೆ

ಬಣಕಲ್: ಕನ್ನಡ ಹೃದಯ ಶ್ರೀಮಂತಿಕೆ ಭಾಷೆ ಎಂದು ಬೆಟ್ಟಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ.ದಿನೇಶ್ ಹೇಳಿದರು.

ನಜರೆತ್ ಶಾಲೆಯಲ್ಲಿ ಬಣಕಲ್ ಕಸಾಪ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತರ ಭಾಷೆಗಳನ್ನು ಗೌರವಿಸಿ, ಕನ್ನಡವನ್ನು ಬೆಳೆಸೋಣ ಎಂದರು.

ಕಸಾಪ ಮೂಡಿಗೆರೆ ತಾಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣ ಗೌಡ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಕನ್ನಡ ಭಾಷೆ ಬೆಳೆಸಲು ಉತ್ತಮ ಚಟುವಟಿಕೆಗಳನ್ನು ನಡೆಸುವ ಅವಶ್ಯಕತೆಯಿದೆ. ಕನ್ನಡ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು.

ಬಣಕಲ್ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕನ್ನಡ ಭಾಷೆ ಅಭಿವೃದ್ಧಿಯಾಗಬೇಕಾದರೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡದಲ್ಲಿಯೇ ಶಿಕ್ಷಣ ದೊರೆಯಬೇಕು ಎಂದರು. ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ಶರಣ್ಯಾ, ಅಂಕಿತಾ, ಎಸ್.ಜಿ.ಧೃತಿ ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು.

ಬಿ.ಕೆ.ಲೋಕೇಶ್, ಹೊರಟ್ಟಿ ರಘು, ಲವಕುಮಾರ್, ಬಿ.ಎಸ್.ವಿಕ್ರಂ, ಮಂಜುನಾಥ ರಾಥೋಡ್, ಶಿವರಾಮೇಗೌಡ, ಸುರೇಶ್, ಬಿ.ಎ.ಯತೀಶ್, ಶರತ್ ಲ್ಗುಣಿ, ಡಿ.ಕೆ.ಮಂಜುನಾಥ್, ಹೆಬ್ರಿಗೆ ಪೂರ್ಣೇಶ್, ಅರವಿಂದ ಕೋಳೂರು, ರಾಮಚಂದ್ರ, ಸುಪ್ರೀತ್ ಬೆಟ್ಟಗೆರೆ, ಭಕ್ತೇಶ್ ಇದ್ದರು.