ಚಿಪ್ಪಲಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಪಂ ಅಧ್ಯೆ ಲಕ್ಷ$್ಮವ್ವ ಕುಂಬಾರ ಉದ್ಘಾಟಿಸಿದರು. ಅಜಯ ಹುಲಮನಿ, ಪ್ರೇಮಲತಾ, ಕೃಷ್ಣಮೂರ್ತಿ ನಾಯ್ಕ, ಉಲ್ಲಾಸ ನಾಯ್ಕ ಇತರರಿದ್ದರು. 
ಜಿಲ್ಲೆ

ಹೃದಯ ಬೇನೆ ರ್ನಿಲಕ್ಷ ಸಲ್ಲದು

ಕಟಕೋಳ: ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಕುರಿತು ಬೇಜಾವಾಬ್ದಾರಿತನ ತೋರದೆ ತಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಧಾರವಾಡ ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​ ಆಡಳಿತಾಧಿಕಾರಿ ಅಜಯ ಹುಲಮನಿ ತಿಳಿಸಿದರು.

ಸಮೀಪದ ಚಿಪ್ಪಲಕಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂದ ಚಂದರಗಿ ವಲಯದ ಜ್ಞಾನ ವಿಕಾಸ ಕೇಂದ್ರ ಸದಸ್ಯರು ಹಾಗೂ ಸ್ವ ಸಹಾಯ ಸಂದ ಸದಸ್ಯರ ಕುಟುಂಬದವರಿಗೆ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪ್ರೇಮಲತಾ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಜನರು ತಮಗಿರುವ ಕಾಯಿಲೆಗಳನ್ನು ಯಾರ ಬಳಿ ಹೇಳದೆ ಮುಚ್ಚಿಟ್ಟು ಜೀವ ಕಳೆದುಕೊಳ್ಳಬಾರದೆಂಬುದು ಶಿಬಿರದ ಉದ್ದೇಶ. ಎಲ್ಲರೂ ಹದಯ ರೋಗ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ ಎಂದರು . 87 ಜನರು ಇಸಿಜಿ ಮತ್ತು 38 ಜನರ ಇಕೋ ಸ್ಕಾನಿಂಗ್​, ಬಿಪಿ&ಶುಗರ್​ ತಪಾಸಣೆಗೆ ಒಳಪಟ್ಟಿದ್ದು, 17 ಜನರಿಗೆ ಹೆಚ್ಚಿನ ತಪಾಸಣೆಗೆ ಧಾರವಾಡದ ಎಸ್​ಡಿಎಂ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತಿಳಿಸಿದರು. ವೈದ್ಯಾಧಿಕಾರಿ ಕಷ್ಣಮೂರ್ತಿ ನಾಯ್ಕ, ಗ್ರಾಪಂ ಅಧ್ಯೆ ಲಕ್ಷ$್ಮವ್ವ ಕುಂಬಾರ, ಉಲ್ಲಾಸ ನಾಯ್ಕ ಇದ್ದರು. ಜ್ಞಾನ ವಿಕಾಸ ಸಂಸ್ಥೆ ಸಮನ್ವಯ ಅಧಿಕಾರಿ ನಿಶಾ ನಿರೂಪಿಸಿದರು. ಸುಭಾಷ ಕುಲಗೊಡ ವಂದಿಸಿದರು.