ಹೂವಿನಹಿಪ್ಪರಗಿ ಗ್ರಾಪಂ ಅಧ್ಯಕ್ಷರಾಗಿ ಶಿವುಬಾಯಿ ಮಾದರ, ಉಪಾಧ್ಯಕ್ಷರಾಗಿ ರಮೇಶ ಶಿವಯೋಗಿ ಆಯ್ಕೆಯಾದರು. ನಿಂಗಣ್ಣ ಶಿವಯೋಗಿ, ಶಾಂತಗೌಡ ನಾಡಗೌಡ, ಮಾಂತೇಶ ಬ್ಯಾಕೋಡ ಇತರರಿದ್ದರು. 
ಜಿಲ್ಲೆ

ಹೂವಿನಹಿಪ್ಪರಗಿ ಗ್ರಾಪಂಗೆ ಆಯ್ಕೆ

Vijayapura - Desk - Parashuram Keri

ಹೂವಿನಹಿಪ್ಪರಗಿ: ಸ್ಥಳೀಯ ಹೂವಿನಹಿಪ್ಪರಗಿ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷರಾಗಿ ಶಿವುಬಾಯಿ ಮಾದರ, ಉಪಾಧ್ಯಕ್ಷರಾಗಿ ರಮೇಶ ಶಿವಯೋಗಿ ಸೋಮವಾರ ಆಯ್ಕೆಯಾದರು.

21 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ 19 ಸದಸ್ಯರು ಮತ ಚಲಾವಣೆ ಮಾಡಿದ್ದು, ಒಂದು ಮತ ಅಸಿಂಧುವಾಗಿದೆ. 10 ಮತಗಳನ್ನು ಪಡೆದು ಶಿವುಬಾಯಿ ಮಾದರ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ರೇಣುಕಾ ಮಾದರ 8 ಮತ ಪಡೆದುಕೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ರಮೇಶ ಶಿವಯೋಗಿ 9 ಮತ ಪಡೆದರು. ಶಹಾಜಾದ್ ಮುಲ್ಲಾಗೋಳ ಕೂಡ 9 ಪಡೆದುಕೊಂಡಿದ್ದರಿಂದ ಇಬ್ಬರ ಹೆಸರುಗಳಿಂದ ಚೀಟಿ ಹಾರಿಸಿದಾಗ ಉಪಾಧ್ಯಕ್ಷರಾಗಿ ರಮೇಶ ಶಿವಯೋಗಿ ಆಯ್ಕೆಯಾದರು ಎಂದು ಚುಣಾವಣಾಧಿಕಾರಿ ಇರ್ಷಾದ ಮೇವಾರ ಘೋಷಿಸಿದರು.

ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಪ್ಪ ಕುಂಬಾರ, ಮುಖಂಡರಾದ ನಿಂಗಣ್ಣ ಶಿವಯೋಗಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಶಾಂತಗೌಡ ನಾಡಗೌಡ, ಮಾಂತೇಶ ಬ್ಯಾಕೋಡ, ಮುರುಗೇಶ ತಾಳಿಕೋಟಿ, ಸಿದ್ದು ಹಾದಿಮನಿ, ಚನ್ನಪ್ಪ ತಿಳಗೋಳ, ಗೌಡಪ್ಪಗೌಡ ಪಾಟೀಲ, ಬಸವರಾಜ ತಾಳಿಕೋಟಿ, ಅಶೋಕ ಶಿವಯೋಗಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಣ್ಣ ಲಚ್ಯಾಣ, ಸಂಗಮೇಶ ಹಳ್ಳೂರ, ಭೀಮಪ್ಪ ಮಾದರ, ಪ್ರಕಾಶ ತೋಟದ, ಚಂದ್ರಶೇಖರ ನಾಡಗೌಡ ಉಪಸ್ಥಿತರಿದ್ದರು. ಅಭಿಮಾನಿಗಳು ಗುಲಾಲು ಹಾಕಿಕೂಂಡು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.