ಕಕ್ಕೇರಾ: ಪಟ್ಟಣದ ಶ್ರೀ ಕರಿಯಪ್ಪ ತಾತನ ಜಾತ್ರಾ ಮಹೋತ್ಸವ ನಿಮಿತ್ತ ಸಹಸ್ರಾರು ಭಕ್ತರ ಜೈಘೋಷಗಳ ಮಧ್ಯೆ ಶುಕ್ರವಾರ ಸಂಭ್ರಮದ ಶ್ರೀ ಕರಿಯಪ್ಪ ತಾತನವರ ಹೂವಿನ ರಥೋತ್ಸವ ಜರುಗಿತು.
ಸಂಜೆ ೬.೧೩ರ ಸುಮಾರಿಗೆ ವಿವಿಧ ಪುಷ್ಪಗಳಿಂದ ಅಲಂಕಾರಗೊAಡ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ, ರಥದ ಸುತ್ತ ಕಳಸದೊಂದಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ರಥದ ಮೇಲೆ ಕಳಸವನ್ನಿರಿಸುತ್ತಿದ್ದಂತೆ ನೆರೆದ ಭಕ್ತ ಸಮೂಹ ಚಪ್ಪಾಳೆ ತಟ್ಟಿ ಖುಷಿವ್ಯಕ್ತಪಡಿಸಿದರು.
ನಂತರ ಪೂಜ್ಯ ಕರಿಮಡ್ಡೆಪ್ಪ ತಾತನವರು ರಥವನ್ನೇರಿ ಭಕ್ತರತ್ತ ಬಿಳಿ ವಸ್ತç ಬೀಸಿ ರಥ ಎಳೆಯುವುದಕ್ಕೆ ಚಾಲನೆ ನೀಡುತ್ತಿದ್ದಂತೆ ಸಂಗಮೇಶ್ವರ ಮಹಾರಾಜಕೀ ಜೈ… ಕರಿಯಪ್ಪ ತಾತನವರ ಮಹಾರಾಜಕೀ ಜೈ… ಮತ್ತು ರಾಮಯ್ಯತಾತನವರ ಮಹಾರಾಜಕೀ ಜೈ… ಎಂಬ ಜೈಘೋಷಗಳು ಮೊಳಗಿದವರು. ಇದರ ಜತೆಗೆ ಭಕ್ತರು ರಥೋತ್ಸವದತ್ತ ಹೂ, ಉತ್ತತ್ತಿ, ಬಾಳೆಹಣ್ಣು ಎಸೆದು ಕರಿಯಪ್ಪ ತಾತನವರ ಕೃಪೆಗೆ ಪಾತ್ರರಾದರು. ರಥೋತ್ಸವ ಪಾದಕಟ್ಟೆ ತಲುಪಿ ಸುರಕ್ಷಿತವಾಗಿ ಸ್ವಸ್ಥಳಕ್ಕೆ ತಲುಪಿತು.
ಬೆಳಗ್ಗೆಯಿಂದ ಭಕ್ತರು ಮಧ್ಯಾಹ್ನದವರೆಗೆ ದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರ ಸಲ್ಲಿಸಿ, ಕರಿಯಪ್ಪ ತಾತಾ, ಸಂಗಮೇಶ್ವರ ಗದ್ದುಗೆಗೆ ಮತ್ತು ರಾಮಯ್ಯತಾತನ ಗದ್ದುಗೆಗೆ ಕಾಯಿ, ಕರ್ಪೂರ ಅರ್ಪಿಸಿದರು. ನಾಗಮೂರ್ತಿಗೆ ಮಹಿಳೆಯರು ಹಾಗೂ ಚಿಕ್ಕಮಕ್ಕಳು ಹಾಲೆರೆದು ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು.
ನಾಗಪಂಚಮಿಯAದು ಶ್ರೀಮಠದ ನಾಗದೇವರ ದಾರ ಧರಿಸುವುದರಿಂದ ಸರ್ಪದೋಷದಿಂದ ಮುಕ್ತಿಯಾಗುವ ಪ್ರತೀತಿ ಹಿನ್ನೆಲೆಯಲ್ಲಿ ಭಕ್ತವೃಂದ ತಮ್ಮ ಭಕ್ತಿ ಕಾಣಿಕೆ ಸಲ್ಲಿಸಿ ನಾಗದೇವರ ದಾರ ಪಡೆದು ತಮ್ಮ ಕೈಗಳಿಗೆ ಕಟ್ಟಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಮೈಸೂರು ದಸರಾ ಖ್ಯಾತಿಯ ಬೀರಲಿಂಗೇಶ್ವರ ಡೊಳ್ಳಿನ ಕಲಾವಿದರಾದ ಜೆಟ್ಟೆಪ್ಪ ಪೂಜಾರಿ, ಮರೆಮ್ಮ ಯಲಗಟ್ಟಿಯವರಿಂದ ಡೊಳ್ಳಿನ ಪದಗಳನ್ನು ಹಾಡಿ ನೆರೆದ ಭಕ್ತರನ್ನು ರಂಜಿಸಿದರು. ಗುರುವಾರ ರಾತ್ರಿ ವಿವಿಧ ಭಜನಾ ತಂಡಗಳಿAದ ಅಹೋರಾತ್ರಿ ಭಜನಾ ಕರ‍್ಯಕ್ರಮಗಳು ಜರುಗಿದವು.
ಹನುಮಂತರಾಯ ಜಹಾಗೀರದಾರ, ಅಯ್ಯಣ್ಣ ಪೂಜಾರಿ, ಮಾನಯ್ಯ ಪೂಜಾರಿ, ಅದಯ್ಯಸ್ವಾಮಿ ಜಾಲಿಬೆಂಚಿ, ಷಣ್ಮುಖಯ್ಯ ಹಗರಟಗಿ, ಗುಂಡಪ್ಪ ಸೊಲಾಪುರ, ದಸ್ತಗೀರಸಾಬ ಶ್ಯಾನಿ ಪೂಜಾರಿ, ರಾಜು ಹವಾಲ್ದಾರ್, ಗುತ್ತಯ್ಯಸ್ವಾಮಿ, ಪರಮಣ್ಣ ಕುಂಬಾರ, ರೋಹಿತ್ ಶೆಟ್ಟಿ, ದೇವಿಂದ್ರಪ್ಪ ಬಳಿಚಕ್ರ, ರಮೇಶಶೆಟ್ಟಿ, ಬಾಲಪ್ಪ ದೇಸಾಯಿ, ದಶರಥ ಆರೇಶಂಕರ, ಸೋಮು ದೊರೆ, ಗುಡದಪ್ಪ ಕುರಿ, ಗೌಡಪ್ಪ ಬೊಮ್ಮನಳ್ಳಿ, ಶೇಕಪ್ಪ ಕಾಳಗಿ, ಬಸಣ್ಣ ಕುಂಬಾರ, ನಂದಣ್ಣ ವಾರಿ, ಪರಮಣ್ಣ ಹಡಪದ, ಪುರಸಭೆ ಸದಸ್ಯರು, ವಿವಿಧ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಪಿಎಸ್‌ಐಗಳಾದ ಅಯ್ಯಪ್ಪ, ಭಾಗಣ್ಣ, ಹನ್ಮಂತ್ರಾಯ ಉಪಸ್ಥಿತರಿದ್ದು ವಾಲ್ಮೀಕಿ, ಕನಕದಾಸ, ಅಂಬೇಡ್ಮರ್ ವೃತ್ತಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದರು. ಅದ್ದೂರಿ ರಥೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾದರು. ರಥೋತ್ಸವ ನಂತರ ಟ್ರಾಫಿಕ್ ಜಾಮ್ ಉಂಟಾಗಿದ್ದರಿAದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದರು.