ಜಿಲ್ಲೆ

ಹೂಳಿನಲ್ಲಿ ಸಿಲುಕಿಕೊಂಡ ಪರ್ಸೀನ್ ಬೋಟ್

ಕಾರವಾರ: ಹೊನ್ನಾವರ ಶರಾವತಿ ಅಳಿವೆಯ ಸಮೀಪ ಹೂಳಿನಲ್ಲಿ ಸಿಲುಕಿಕೊಂಡ ಪರ್ಸೀನ್ ಬೋಟ್ ಒಂದಕ್ಕೆ ಧಕ್ಕೆಯಾಗಿದೆ. ಅಲ್ ಬಾಹರ್ ಎಂಬ ಬೋಟ್​ನ ತಳಭಾಗ ಹಾಗೂ ಇಂಜಿನ್​ಗೆ ಹಾನಿಯಾಗಿದೆ.

ಬಲೆ ರಿಪೇರಿಗಾಗಿ ಬಂದರಿನಿಂದ ಸ್ವಲ್ಪ ಹೊರಗೆ ಬೋಟ್ ಲಂಗರು ಹಾಕಲಾಗಿತ್ತು. ಅದೇ ಭಾಗದಲ್ಲಿ ಖಾಸಗಿ ಬಂದರು ನಿರ್ವಣಕ್ಕಾಗಿ ಕಂಪನಿ ಹೂಳೆತ್ತಿದ್ದರಿಂದ ಬೋಟ್ ಹೂಳಿನಲ್ಲಿ ಸಿಲುಕಿ ಅದಕ್ಕೆ ಧಕ್ಕೆಯಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.