ಜಿಲ್ಲೆ

ಹೂಮಾಲೆ ಹಾಕ್ತೀನಿ....ಇಲ್ಲಾಂದ್ರೆ ಬೂಟ್ ನಿಂದ ಹೊಡಿತೀನಿ....ಇದೆಂಥ ಕಾಂಪ್ರಮೈಸ್ ಕತ್ತಿ ಸಾಹೇಬ್ರೆ....!

ವಿಜಯಪುರ: ಅಂದುಕೊಂಡಂತೆ ಕೆಲಸ ಆದ್ರೆ ಹೂಮಾಲೆ ಹಾಕ್ತೀನಿ...ಇಲ್ಲಾಂದ್ರೆ ಬೂಟ್ ನಿಂದ ಹೊಡೀತೀನಿ....ಎಂದು ಸಚಿವ ಉಮೇಶ ಕತ್ತಿ ಇಂಜಿನೀಯರ್ ಗೆ ಹೇಳಿದ್ದಾರೆ.

ವಿಜಯಪುರದ ಬುರಾಣಪುರ ಬಳಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಚಿಕ್ಕಲಗಿಗೆ ಬೂಟಿನಿಂದ ಹೊಡಿತೀನಿ ಎಂದ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಬರುವ ನವೆಂಬರ್- ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಮಾಡ್ತೀವಿ ಎಂದು ಕಾರ್ಯನಿರ್ವಾಹಕ ಅಭಿಯಂತರ ಹೇಳಿದರು.

ನಾನು ಮಾರ್ಚ್ ಒಳಗೆ ಮುಗಿಸಿ ಅಂತಿದ್ದೀ‌ನಿ... ನೀನು ಡಿಸೆಂಬರ್ ಒಳಗೆ ಮುಗಿಸ್ತೀನಿ ಅಂದ್ರೆ ಹೂಮಾಲೆ ಹಾಕತೀನಿ. ಇಲ್ಲಂದ್ರೆ ಬೂಟಿನಿಂದ ಹೊಡಿತಿನಿ. ಈ ರೀತಿ ಕಾಂಪ್ರಮೈಸ್ ಇದೆ ಎಂದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ,ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ ಮತ್ತಿತರ ಅಧಿಕಾರಿಗಳಿದ್ದರು.