ಜಿಲ್ಲೆ

ಹೂತಗೆರೆ ಗ್ರಾಪಂಗೆ ಆಯ್ಕೆ

ಮದ್ದೂರು: ತಾಲೂಕಿನ ಹೂತಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಾರದಾ ಹಾಗೂ ಉಪಾಧ್ಯಕ್ಷರಾಗಿ ಲಲಿತಮ್ಮ ಆಯ್ಕೆಯಾದರು.

ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾರದಾ, ಜರೀನಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಮ್ಮ, ನೀಲಮಣಿ ನಾಮಪತ್ರ ಸಲ್ಲಿಸಿದರು. ಬಳಿಕ ಮತದಾನ ನಡೆದು ಶಾರದಾ(9 ಮತ) ತಮ್ಮ ಪ್ರತಿಸ್ಪರ್ಧಿ ಜರೀನಾ (8) ವಿರುದ್ಧ ಜಯ ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಲಿತಮ್ಮ (10) ತಮ್ಮ ಎದುರಾಳಿ ಪ್ರತಿಸ್ಪರ್ಧಿ ನೀಲಮಣಿ (7 ಮತ) ಅವರನ್ನು ಸೋಲಿಸಿದರು.

ಮುಖಂಡರಾದ ಬಿಳಿಯಪ್ಪ, ಮನುಕುಮಾರ್, ಶಂಕರ್, ಗದ್ದೇಗೌಡ, ರವಿ, ಜನಾರ್ದನ, ಈರೇಗೌಡ, ಪ್ರಸಾದ್, ಬೆಟ್ಟಸ್ವಾಮಿ, ಪ್ರವೀಣ್, ರಾಜು, ರವಿಕುಮಾರ್ ಹಾಗೂ ಗ್ರಾಪಂ ಸದಸ್ಯರು ಇದ್ದರು.