ನಗರದ ಚಿಕ್ಕಮಗಳೂರು ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಬುಲ್‌ಫೋರ್ಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೂಡಿಕೆದಾರರ ಸಮಾವೇಶದ ಮೂಲಕ ಜನರಲ್ಲಿ ಹಣ ಮೋಸವಾಗದಂತೆ ರಕ್ಷಣೆ ಮತ್ತು ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು. ಎನ್‌ಎಸ್‌ಇ ಜಾಗತಿಕ ಮಟ್ಟದಲ್ಲಿ ಇದು ದೇಶದ ಪ್ರತಿಷ್ಠಿತ ಎಕ್ಸ್ಚೇಂಜ್ ಆಗಿ ಪರಿವರ್ತನೆಗೊಂಡಿದ್ದು, ಹೂಡಿಕೆದಾರರಿಗೆ ಅನುಕೂಲವಾಗುವಂತೆ ಮಾರ್ಗದರ್ಶನ ನೀಡುವುದು ಇದರ ಉದ್ದೇಶ. ನ್ಯಾಷನಲ್ ಎಕ್ಸ್ಚೇಂಜ್‌ನಿಂದ ಆನಂದ್ ದೀಪಕ್ ವೆಕಾರ್ಯ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುವ ಬಹುದೊಡ್ಡ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ದೇಶಾದ್ಯಂತ ನಡೆಸಲು ಗುರಿಹೊಂದಲಾಗಿದೆ. ಜಿಲ್ಲೆಯ ಜನರನ್ನು ಆಹ್ವಾನಿಸಿದ್ದು, ಬಹಳಷ್ಟು ಜನ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು. ಸಾಮಾನ್ಯ ಜನರು ಹೂಡಿಕೆ ಮಾಡಲು ಅವಕಾಶ ಇದ್ದು, ಪ್ರತೀ ತಿಂಗಳು ೧೫ ರಿಂದ ೨೦ ಲಕ್ಷ ಹೊಸ ಸದಸ್ಯರು ಭಾಗವಹಿಸುತ್ತಿದ್ದಾರೆ. ಹೂಡಿಕೆ ಬಗ್ಗೆ ಹಾಗೂ ನಿಶ್ಚಿತ ಠೇವಣಿಗಳ ಕುರಿತು ಅವರಿಗೆ ಸಮಗ್ರ ಮಾಹಿತಿ ನೀಡಿ ಹಣ ಮೋಸವಾಗದ ರೀತಿಯಲ್ಲಿ ರಕ್ಷಣೆಯನ್ನು ಬುಲ್‌ಫೋರ್ಸ್ ಸಂಸ್ಥೆ ನೀಡಲಿದೆ ಎಂದು ಭವರಸೆ ನೀಡಿದರು. ಈ ಸಂದರ್ಭದಲ್ಲಿ ವಿಘ್ನೇಶ್ ರೆಡ್ಡಿ, ದೀಪಕ್, ಆನಂದ್, ವಿಕ್ರಮ್, ಅಶ್ವಿನಿಸೋಮಣ್ಣ, ವಿನಿತ್‌ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.