ಜಿಲ್ಲೆ

ಹುಳಿಯಾರಲ್ಲಿ ಅಲೆಮಾರಿಗಳಿಗೆ ನಿವೇಶನ ಹಂಚಿಕೆಗೆ ನೂರೆಂಟು ವಿಘ್ನ

ಫಲಾನುಭವಿ ಆಯ್ಕೆ ಗ್ರಾಮಸಭೆ ರದ್ದು, ಸೈಟ್​ಗಾಗಿ ಸ್ಥಳಿಯರ ಪಟ್ಟು, ಜನರ ಪ್ರಶ್ನೆಗೆ ಉತ್ತರಿಸಲಾಗದೆ ಪರದಾಡಿದ ಗ್ರಾಪಂ ಅಧ್ಯಕ್ಷ

ಹುಳಿಯಾರು: ಪಟ್ಟಣದ ಕೆರೆ ಅಂಗಳದಲ್ಲಿರುವ 27 ಅಲೆಮಾರಿ ಕುಟುಂಬಗಳಿಗೆ ನಿವೇಶನ ನೀಡುವ ಉದ್ದೇಶದಿಂದ ಸಮೀಪದ ಕರಡಿಸಾಬರಪಾಳ್ಯದ ಬಳಿ ಮಂಜೂರಾಗಿರುವ 30 ಗುಂಟೆ ಭೂಮಿ ಹಂಚಿಕೆ ವಿವಾದಕ್ಕೆ ಕಾರಣವಾಗಿದೆ.

ಲಭ್ಯವಾಗುವ ಭೂಮಿಯಲ್ಲಿ ನಿರ್ಮಿಸುವ 13 ನಿವೇಶನ ಹಂಚಿಕೆಗೆ ಕೆಂಕೆರೆ ಗ್ರಾಪಂ ಆವರಣದಲ್ಲಿ ಗ್ರಾಮಸಭೆ ಕರೆದು ಅನುಮೋದನೆ ಪಡೆಯಬೇಕಿತ್ತು. ಆದರೆ, ಕೆಲವು ಲಾನುಭವಿಗಳ ಒತ್ತಾಯದಂತೆ ಕರಡಿಸಾಬರಪಾಳ್ಯ ವಾರ್ಡ್​ನಲ್ಲಿಯೇ ಶನಿವಾರ ವಿಶೇಷ ಗ್ರಾಮಸಭೆ ನಡೆಸಲು ಮುಂದಾದ ಅಧಿಕಾರಿಗಳು ಸಮಸ್ಯೆ

ಬಗೆಹರಿಸಲಾಗದೆ ಪೇಚಿಗೆ ಸಿಲುಕಿದರು.

ವಾರ್ಡ್​ಸಭೆಯಲ್ಲಿ 27 ಅಲೆಮಾರಿ ಕುಟುಂಬಗಳಿದ್ದ 13 ಕುಟುಂಬಕ್ಕೆ ಮಾತ್ರ ನಿವೇಶನ ನೀಡಿದರೆ ಹೇಗೆ ಎಂಬ ಪ್ರಶ್ನೆಯಿಂದ ಆರಂಭವಾದ ವಾಗ್ವಾದ ಅಲೆಮಾರಿಗಳ ಬದಲಾಗಿ ಸ್ಥಳಿಯರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಕ್ಕೆ ತಿರುಗಿತು. ಜನರಿಗೆ ಉತ್ತರಿಸಲಾಗದ ಗ್ರಾಪಂ ಅಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿದರು. ಅಲೆಮಾರಿಗಳಿಗಾಗಿಯೇ ಮೀಸಲಿಟ್ಟಿದ್ದ ಜಾಗದಲ್ಲಿ ಉಳಿದ ಸಮುದಾಯದವರಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳ ಉತ್ತರಕ್ಕೆ ಸಿಟ್ಟಾದ ಸ್ಥಳಿಯರು ನಮ್ಮಲ್ಲಿಯೂ ಕೆಲವರಿಗೆ ಕಳೆದ ಎರಡು ವರ್ಷದ ಹಿಂದೆಯೇ ನಿವೇಶನ ಹಂಚಲಾಗಿದ್ದರೂ ಈವರೆಗೂ ಮಂಜೂರಾತಿ ಪತ್ರ ನೀಡಿಲ್ಲ ಎಂದು ಹರಿಹಾಯ್ದರು. ಅಲೆಮಾರಿಗಳಿಗೆ ನಮ್ಮೂರ ಬಳಿ ನಿವೇಶನ ಕೊಡಲು ಬಿಡುವುದಿಲ್ಲ. ನಮ್ಮೂರು ಸೇರಿದಂತೆ ಕೆಂಕೆರೆ ಗ್ರಾಪಂ ವ್ಯಾಪ್ತಿಯಲ್ಲಿಯೇ ನೂರಾರು ವಸತಿರಹಿತರಿದ್ದು, ಅವರಲ್ಲಿ ಯಾರಿಗಾದರೂ ಕೊಡಿ ಎಂದು ಪಟ್ಟುಹಿಡಿದರು. ಸಭೆಗೆ ಮಾರ್ಗದರ್ಶಿ ಅಧಿಕಾರಿಗಳಾಗಿ ಆಗಮಿಸಿದ್ದ ಮೀನುಗಾರಿಗೆ ಇಲಾಖೆ ಉಪನಿರ್ದೇಶಕ ಶಿವಶಂಕರ್​ ಸಮಸ್ಯೆ ಅರ್ಥವಾಗದೆ ತಬ್ಬಿಬ್ಬಾಗಿ ಕುಳಿತಿದ್ದರು. ಕೆಂಕೆರೆ ಗ್ರಾಪಂ ಉಪಾಧ್ಯೆ ಮಹಾಲಕ್ಷ$್ಮಮ್ಮ, ಪಿಡಿಒ ತಿಪ್ಪೇಸ್ವಾಮಿ ಇದ್ದರು.---------

-ಜಾಗಕ್ಕಾಗಿ ಮೊರೆ: ಸ್ಥಳಿಯರ ವಿರೋಧದಲ್ಲಿ ಲಾನುಭವಿಗಳ ಆಯ್ಕೆ ಪ್ರಕ್ರಿಯೆ ರದ್ದಾದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ಅಲೆಮಾರಿಗಳು ಕೂಡಲೇ ನಿವೇಶನ ನೀಡಬೇಕು ಎಂದು ಬೇಡಿಕೊಂಡರು. ಹುಳಿಯಾರು ಕೆರೆ ಅಂಗಳದಲ್ಲಿ 30 ವರ್ಷಗಳಿಂದಲೂ ವಾಸವಾಗಿದ್ದು, ಕೆರೆ ನೀರು ತುಂಬಿದ ಪರಿಣಾಮ ಬೀದಿಗೆ ಬಿದ್ದಿದ್ದೇವೆ. ನಮಗೊಂದು ಸೂರು ಕೊಡಿ ಎಂದು ದಶಕಗಳಿಂದ ಹೋರಾಡಿದ ಪರಿಣಾಮ ಎರಡು ವರ್ಷಗಳ ಹಿಂದೆ ಕರಡಿಸಾಬರಪಾಳ್ಯದ ಬಳಿ 1.35 ಎಕರೆ ಜಾಗ ಗುರುತಿಸಲಾಗಿದ್ದು, ಅದಕ್ಕೂ ವಿರೋಧ ಸರಿಯಲ್ಲ. ನಿವೇಶನ ಹಂಚುವ ಸಂದರ್ಭದಲ್ಲಿ 34 ನಿವೇಶನ ಮಾತ್ರ ಅಲೆಮಾರಿಗಳಿಗೆ ಕೊಟ್ಟು ಉಳಿದಿದ್ದನ್ನು ಅಲ್ಲಿನ ಸ್ಥಳಿಯರಿಗೂ ನೀಡಲಾಗಿದೆ. ಅಲೆಮಾರಿಗಳಲ್ಲಿನ ನಿವೇಶನರಹಿತರಿಗೆ ನೀಡಲು 30 ಗುಂಟೆ ಜಾಗ ಮೀಸಲಿಟ್ಟು 13 ಮಂದಿ ಆಯ್ಕೆಮಾಡಲಾಗುತ್ತಿದೆ. ಇದಕ್ಕೆ ವಿರೋಧ ಮಾಡಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.