ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಹುಲಿಗೆಮ್ಮ ದೇವಿ ಗಂಗೆ ಸ್ಥಳ ಮಹೋತ್ಸವ ಸೋಮವಾರ ನಡೆಯಿತು. ದೇವಸಮುದ್ರ ಕ್ರಾಸ್ ಬಳಿಯ ಎಲ್.ಎಲ್.ಸಿ. ಕಾಲುವೆಯಿಂದ ಗಂಗೆಸ್ಥಳ ಮೆರವಣಿಗೆ ಆರಂಭಗೊಂಡಿತು.
108 ಪೂರ್ಣಕುಂಭ, ಮಂಗಳವಾದ್ಯಗಳು ಪಾಲ್ಗೊಂಡಿದ್ದವು. ದೇವಸ್ಥಾನ ಆವರಣದಲ್ಲಿ ಗಂಗೆಸ್ಥಳ ಮೆರವಣಿಗೆ ಸಮಾರೋಪಗೊಂಡಿತು. ದೇವಿಗೆ ಪಂಚಾಮೃತ ಅಭಿಷೇಕ, ಹೋಮ, ಗಣಪತಿ ಪೂಜಾ ಪುಣ್ಯವಾಚನ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಶಾಸಕ ಜೆ.ಎನ್.ಗಣೇಶ್ ಪಾಲ್ಗೊಂಡಿದ್ದರು.
ಫೆ.18ರಂದು ಹುಲಿಗೆಮ್ಮದೇವಿಯ ಕುಂಭೋತ್ಸವ, ಅನ್ನಸಂತರ್ಪಣೆ ನಡೆಯಲಿದೆ ಎಂದು ಹುಲಿಗೆಮ್ಮದೇವಿ ಸೇವಾ ಸಮಿತಿ ಅಧ್ಯಕ್ಷ ಜಿ.ಪ್ರಸಾದ್ ತಿಳಿಸಿದರು. ಪದಾಧಿಕಾರಿಗಳಾದ ಬಿ.ಸುರೇಶಕುಮಾರ್, ಎನ್.ಓಬಳೇಶ, ಬಿ.ಹೊನ್ನೂರಪ್ಪ, ಎನ್.ಸೋಮಶೇಖರ, ಎಚ್.ಹೊನ್ನೂರಪ್ಪ, ಎಚ್.ಮಾರೇಶ್, ವೀರೇಶ್, ಭದ್ರಿ, ಮಲ್ಲಯ್ಯ,ಇದ್ದರು.