ಜಿಲ್ಲೆ

ಹುಲಿ ಹುಡುಕಾಟಕ್ಕಾಗಿ ಮುಂದುವರೆದ ಕೂಂಬಿಂಗ್

ಎ.ಎಸ್.ಮಣಿಕಂಠ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ತಾಲೂಕಿನ ಪುಣಜನೂರು ಅರಣ್ಯ ಪ್ರದೇಶದಲ್ಲಿ ಮೂರು ಮರಿಗಳಿಂದ ಬೇರ್ಪಟ್ಟಿರುವ ತಾಯಿ ಹುಲಿಯ ಹುಡುಕಾಟಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆ ಗುರುವಾರವೂ ಮುಂದುವರೆಯಿತು. ಆದರೆ ಹುಲಿಯ ಸುಳಿವು ಸಿಗಲಿಲ್ಲ.

ಕಾರ್ಯಾಚರಣೆ ಹೇಗಿದೆ?: ಅರಣ್ಯ ಪ್ರದೇಶದ ಸುತ್ತಮುತ್ತ ಸಾಕಾನೆಗಳಾದ ಭೀಮ, ಮಹೇಂದ್ರ, ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಥರ್ಮಲ್ ಡ್ರೋನ್ ಬಳಸಿ ತಾಯಿ ಹುಲಿಯ ಹುಡುಕಾಟವನ್ನು ನಡೆಸಲಾಯಿತು. ಶ್ವಾನದಳದನ್ನೂ ಸಹ ಬಳಕೆ ಮಾಡಿಕೊಳ್ಳಲಾಯಿತು. ಶುಕ್ರವಾರವೂ ಸಹ ಹುಲಿಯ ಹುಡುಕಾಟದ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.