ಜಿಲ್ಲೆ

ಹುಲಿ ಸಂರಕ್ಷಿತಾರಣ್ಯ ಪ್ರದೇಶ ಕೂಗಿಗೆ ಬಲ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ದುರ್ಮರಣ ಸಂರಕ್ಷಣೆಯ ಕೂಗನ್ನು ಗಟ್ಟಿಗೊಳಿಸಿದೆ. ವನ್ಯಜೀವಿಧಾಮವನ್ನು ಹುಲಿ ಯೋಜನೆ ಪ್ರದೇಶವಾಗಿ ೋಷಣೆ ಮಾಡಬೇಕೆಂಬ ಒತ್ತಾಯಕ್ಕೆ ಬಲ ಸಿಕ್ಕಿದೆ.

ಈ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡಲು ಅರಣ್ಯ ಇಲಾಖೆಯಿಂದ ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಇದಕ್ಕೆ ಭಾರಿ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತಡೆ ಬಿದ್ದಿತು.

ದೊಡ್ಡಮಟ್ಟದ ವಿರೋಧ: ರಾಜ್ಯದ ವಿವಿಧ ಜಿಲ್ಲೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಬರುತ್ತಾರೆ. ಇದನ್ನು ಹುಲಿ ಯೋಜನೆ ಪ್ರದೇಶವಾಗಿ ೋಷಣೆ ಮಾಡಿದರೆ ಭಕ್ತರ ಪ್ರವೇಶಕ್ಕೆ ನಿಯಗಳು ಅಡ್ಡಿಯಾಗುತ್ತಿದೆ ಎನ್ನುವ ಕಾರಣಕ್ಕೆ ಮಾದಪ್ಪನ ಭಕ್ತ ವಲಯದಿಂದ ವಿರೋಧ ವ್ಯಕ್ತವಾಯಿತು. ಇಲ್ಲಿನ ಕಾಡಿನ ಸ್ಥಳೀಯ ನಿವಾಸಿಗಳಿರುವ ಪ್ರದೇಶದಲ್ಲಿ ಮೂಲಸೌಕರ್ಯಗಳಿಲ್ಲ. ಇಂದಿಗೂ ಸಹ ಕಷ್ಟ ಅನುಭವಿಸುತ್ತಿದ್ದಾರೆ. ಇವರಿಗೆಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡದೆ ಹುಲಿ ಯೋಜನೆ ೋಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ಸೌಲಭ್ಯಗಳು ಸಿಗುವುದೇ ಮರೀಚಿಕೆಯಾಗುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಗ್ರಾಮಸ್ಥರು, ಮುಖಂಡರು ಸಭೆ ನಡೆಸಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇವರು ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ನಂತರದ ದಿನಗಳಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿ ೋಷಣೆ ಮಾಡಬೇಕೆಂಬ ಕೂಗು ಕಡಿಮೆಯಾಯಿತು. ಆದರೆ ವನ್ಯಜೀವಿ ಧಾಮದಲ್ಲಿ ಐದು ಹುಲಿಗಳ ಸಾವು ಮತ್ತೆ ಅರಣ್ಯದ ಸಂರಕ್ಷಣೆಯ ಒತ್ತಾಯವನ್ನು ಹೆಚ್ಚಳಗೊಳಿಸಿದೆ.

ಎರಡು ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳು: ರಾಜ್ಯದಲ್ಲಿ ಎರಡು ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿರುವ ಜಿಲ್ಲೆ ಚಾಮರಾಜನಗರ. ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿರು ಬಂಡೀಪುರ ಮತ್ತು ನಿತ್ಯ ಹರಿದ್ವರ್ಣ ಕಾಡಾಗಿರುವ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವನ್ಯಜೀವಿಗಳ ಆವಾಸಸ್ಥಳಗಳಾಗಿವೆ. ಬಂಡೀಪುರ ಕಾಡಿನಲ್ಲಿ 191, ಬಿಆರ್‌ಟಿಯಲ್ಲಿ 44 ಹುಲಿಗಳಿವೆ. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5ಕ್ಕೂ ಹೆಚ್ಚು ಹುಲಿಗಳಿದ್ದು, ಹುಲಿ ಯೋಜನೆ ೋಷಣೆಯಾಗಿದ್ದರೆ ಮಲೆ ಮಹದೇಶ್ವರ ವನ್ಯಜೀವಿಧಾಮ ರಾಜ್ಯದ 6ನೇ ಮತ್ತು ಜಿಲ್ಲೆಯ 3ನೇ ಹುಲಿ ಮೀಸಲು ಪ್ರದೇಶವಾಗುತ್ತಿತ್ತು. ಹುಲಿಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಈ ಅರಣ್ಯವು 94 ಸಾವಿರ ಹೆಕ್ಟೇರ್ ವಿಸ್ತೀರ್ಣಕ್ಕೂ ಹೆಚ್ಚು ಪ್ರದೇಶವನ್ನು ಹೊಂದಿದೆ. ಪೂರ್ವಕ್ಕೆ ಕಾವೇರಿ ನದಿ, ದಕ್ಷಿಣಕ್ಕೆ ತಮಿಳುನಾಡಿನ ಸತ್ಯಮಂಗಲ ಹಾಗೂ ಪಶ್ಚಿಮಕ್ಕೆ ಬಿಳಿಗಿರಿರಂಗಸ್ವಾಮಿ ದೇವಾಲಯ ದಟ್ಟ ಅರಣ್ಯ ಪ್ರದೇಶ ಹೊಂದಿದೆ. 2018 ರಲ್ಲಿ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಗಳ ಗಣತಿ ನಡೆಸಲಾಗಿತ್ತು. 350 ಕ್ಕೂ ಹೆಚ್ಚು ಆನೆಗಳು, 25 ಹುಲಿಗಳು, 17 ಚಿರತೆ ಸಂಖ್ಯೆ ಹೆಚ್ಚಳವಾಗಿ ಕಂಡು ಬಂದಿದ್ದವು. ಅಳವಿನಂಚಿನಲ್ಲಿರುವ ಹನಿಬಡ್ಜರ್, ಜಿಂಕೆ, ಸಾರಗ, ಮೊಲ, ಹಾಗೂ ಸಣ್ಣಪುಟ್ಟ ವನ್ಯಪ್ರಾಣಿಗಳು ಪತ್ತೆಯಾಗಿದ್ದವು. ಪ್ರಸ್ತುತ ವನ್ಯಪ್ರಾಣಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಪಿ.ಜಿ.ಪಾಳ್ಯ ಮತ್ತು ಅಜ್ಜೀಪುರದಲ್ಲಿ ಸಫಾರಿ ಸೌಲಭ್ಯಗಳಿವೆ. ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆದರೆ ವನ್ಯಜೀವಿಧಾಮದಲ್ಲೇ ಹುಲಿಗಳನ್ನು ಸಂರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಐದು ಹುಲಿಗಳು ಸಾಯುವುದಕ್ಕೆ ಇದೂ ಸಹ ಪ್ರಮುಖ ಕಾರಣವಾಗಿದೆ.

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿವೆ. ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗುವ ಎಲ್ಲ ಲಕ್ಷಣಗಳೂ ಇವೆ. ಯೋಜನೆ ೋಷಣೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಯೋಜನೆ ೋಷಣೆಯಾಗುವ ಮುನ್ನ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜನರಿಂದಲೂ ಸಹಕಾರನ್ನು ಪಡೆದುಕೊಳ್ಳಬೇಕು. ಎಂ.ಆರ್.ಮಂಜುನಾಥ್, ಶಾಸಕ, ಹನೂರು