ಹುಲಿ ಸಂತತಿಯನ್ನು ಉಳಿಸಿ, ಬೆಳೆಸಲು ಎಲ್ಲರ ಸಹಕಾರ ಬೇಕು ಎಂದು ಚಾಮರಾಜೇಂದ್ರ ಮೃಗಾಲಯದ ಶಿಕ್ಷಣ ಅಧಿಕಾರಿ ಎಂ.ಎಸ್.ಸುಜೋಷಾ ಹೇಳಿದರು.
ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಸರಸ್ವತಿಪುರಂನ ಟಿಟಿಎಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಹುಲಿ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನಂತೆ ಪ್ರಾಣಿಗಳಲ್ಲೂ ಜೀವನಶೈಲಿ ಒಂದು ಕೌತುಕ. ಕಾಡಿನಲ್ಲಿ ವಾಸ ಮಾಡುವ ಹುಲಿ, ಸಿಂಹಗಳ ಜೀವನ ಕ್ರಮ ಬಹಳ ಭಿನ್ನವಾಗಿರುತ್ತದೆ. ಅವುಗಳ ಸಂತತಿ ರಕ್ಷಣೆಗೆ ನಾವು ಬೆಂಬಲಿಸಬೇಕು ಎಂದರು.
ದೇಶದಲ್ಲಿ ಹೆಚ್ಚು ಹುಲಿಗಳು ವಾಸವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಹುಲಿಗಳನ್ನು ಪತ್ತೆ ಹಚ್ಚಲು ಅವುಗಳ ಹೆಜ್ಜೆ ಗುರುತು, ಲದ್ದಿ, ಕ್ಯಾಮರಾ ಟ್ರಾೃಪಿಂಗ್ ತಂತ್ರಜ್ಞಾನ ಬಳಸಲಾಗುತ್ತದೆ ಎಂದರು.
ಪ್ರಾಂಶುಪಾಲರಾದ ಡಾ.ಬಿ.ವಿ.ಪ್ರಶಾಂತ್, ಎಸ್.ಭ್ರಮರಾಂಬಾ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್‌ಶಾಸ್ತ್ರಿ ಹಾಜರಿದ್ದರು.