Oplus_16908288 
ಜಿಲ್ಲೆ

ಹುಲಿ ದಾಳಿಗೆ ಹಸು ಬಲಿ

ಸಿದ್ದಾಪುರ: ತಾಲೂಕಿನ ಮಾಲ್ದಾರೆ ಸಮೀಪದ ಮಠ ಗ್ರಾಮದಲ್ಲಿ ಬುಧವಾರ ಹಾಡಹಗಲೇ ಮನೆಯ ಸಮೀಪವೇ ಮೇಯಲು ಬಿಟ್ಟಿದ್ದ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿದೆ.

ಪ್ರವೀಣ್ ಎಂಬುವರ ಗಬ್ಬದ ಹಸು ಹುಲಿ ದಾಳಿಗೆ ಬಲಿಯಾಗಿರುವುದು. ಹಸುವನ್ನು ಮೇಯಲು ಬಿಟ್ಟು ಮನೆಗೆ ತೆರಳಿದ್ದ ಸಂದರ್ಭ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ. ನಂತರ ಹುಲಿ ಸಮೀಪದ ತೋಟವನ್ನು ಹೊಕ್ಕಿದೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಹುಲಿಯನ್ನು ಶೀಘ್ರ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹುಲಿಯ ಚಲನವಲನ ಪರಿಶೀಲಿಸಲು ಕ್ಯಾಮರಾ ಅಳವಡಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಗುರುವಾರವೂ ಕಾರ್ಯಾಚರಣೆ ನಡೆಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಎಫ್‌ಒ ಗಂಗಾಧರ್, ನೇತೃತ್ವದಲ್ಲಿ ಡಿಆರ್‌ಎಫ್‌ಒ ಶಶಿ, ಆರ್‌ಆರ್‌ಟಿ ತಂಡದ ಭರತ್, ಶಂಕರ್, ರೋಹಿತ್ ಸಚಿನ್, ರೋಷನ್, ಮಂಜು ಇದ್ದರು.