ಜಿಲ್ಲೆ

ಹುಲಿ ದಾಳಿಗೆ ಹಸು ಬಲಿ

ಗುಂಡ್ಲುಪೇಟೆ: ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮದ ಮಲ್ಲೇಶ್ ಅವರ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ ಹಸು ಮೇಯುವಾಗ ಏಕಾಏಕಿ ಹುಲಿ ದಾಳಿ ನಡೆಸಿ ಕೊ ಂದು ಹಾಕಿದೆ. ವಿಷಯ ತಿಳಿದ ಓಂಕಾರ್ ವಲಯದ ಡಿಆರ್‌ಎಫ್‌ಒ ಅಮರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಜಾನುವಾರು ನಷ್ಟಕ್ಕೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.