ಜಿಲ್ಲೆ

ಹುಲಕೋಟಿ ಕೈಲಾಸ ಆಶ್ರಮದ 31ನೇ ವಾರ್ಷಿಕೋತ್ಸವ

ಗದಗ:
ಮಾನವೀಯ ಸಂಬಂಧದ ದೃಷ್ಟಿಕೋನ ಬದಲಾಗುತ್ತಿದೆ. ಯಾವುದು ಸರಿ, ಯಾವುದು ತಪ್ಪು ಅರಿಯದೇ ಇದ್ದರೆ ನಾವಿನ್ನೂ ಬದುಕುವುದನ್ನೇ ಆರಂಭಿಸಿಲ್ಲ ಎಂದೇ ಅರ್ಥ ಎಂದು ಹುಲಕೋಟಿ ಕೈಲಾಸಾಶ್ರಮದ ಜಯೇಂದ್ರಪುರಿ ಶ್ರೀಗಳು ಹೇಳಿದರು.
ಶನಿವಾರ ಜರುಗಿದ ತಾಲೂಕಿನ ಹುಲಕೋಟಿಯ ಕಲಾಸ ಆಶ್ರಮದ 31ನೇ ವಾಷರ್ಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾನವೀಯ ಸಂಬಂಧಗಳ ಕುರಿತು ಮಾತನಾಡಿದ ಅವರು, ಗ್ರಂಥಗಳು, ವಚನ, ದಾಸ ಸಾಹಿತ್ಯದಲ್ಲಿ ಸರಿ ತಪ್ಪುಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಅವುಗಳನ್ನು ಅರಿತು ಬದುಕು ನಡೆಸಬೇಕು. ಪ್ರಾಮಾಣಿಕತೆಯೇ ಮೊದಲ ಮಾನವೀಯ ಗುಣ. ವಿಚಾರ, ಮಾತು ಹಾಗೂ ನಡೆಗಳಲ್ಲಿ ಒಂದೇ ಇದ್ದರೆ ಮಾನವೀಯ ಮೌಲ್ಯವರ್ಧನೆ ಆಗುತ್ತದೆ. ಅದರಂತೆ ನಾವು ಬಾಳ್ವೆ ಮಾಡಬೇಕು ಎಂದರು.
ಉಪಕಾರ ಮಾಡಿದವರಿಗೆ ಉಪಕಾರ ಮಾಡಿದರೆ ಅದು ಸಾಮಾನ್ಯತೆ. ಅಪಕಾರ ಮಾಡಿದವರಿಗೆ ಉಪಕಾರ ಮಾಡಿದರೆ ಅದು ಮಾನವೀಯತೆ. ಸತ್ಸಂಗದಲ್ಲಿ ಮಾನವೀಯತೆ ಇದೆ ಎಂದು ಕಲಾಸ ಆಶ್ರಮದ ಜಯಯೇಂದ್ರಪುರಿ ಶ್ರೀಗಳು ನುಡಿದರು.
ತೋಂಟದ ಸಿದ್ದರಾಮ ಶ್ರೀಗಳು ಮಾತನಾಡಿ, `ಮೊದಲು ನೀ ಮಾನವನಾಗು' ಎಂಬ ಮಾತನ್ನು ಮನುಷ್ಯನಿಗೆ ಅರ್ಥವಾಗುವಂತೆ ಹೇಳಲಾಗಿದೆ. ಏಕೆಂದರೆ ಮಾನವೀಯ ಸಂಬಂಧದ ಅರಿವು ನಮ್ಮಲ್ಲಿ ಇರದೇ ಇದ್ದರೆ ಮನುಷ್ಯತ್ವವೇ ಇಲ್ಲ. ಅನ್ನದ ಅಗಳನ್ನು ಕಂಡರೆ ಕಾಗೆ ಕೋಳಿಗಳೂ ತಮ್ಮ ಕುಲಬಾಂಧವರನ್ನು ಕರೆಯುತ್ತವೆ. ಆದರೆ ಅರಿವಿಲ್ಲ ಮನುಷ್ಯ ಪ್ರಾಣಿಗಿಂತಲೂ ಕಡೆ. ಮಾನವ ಪ್ರೀತಿ ಅತೀ ಮುಖ್ಯ ಎಂದು ಹೇಳಿದರು.
ಶಿವಾನಂದ ಬ್ರಹನ್ಮಠದ ಅಭಿನವ ಶಿವಾನಂದ ಶ್ರೀಗಳು, ನಾನೂ ಬೇರೆ, ನೀನೂ ಬೇರೆ ಎನ್ನುವುದು ಇರಬಾರದು. ಕೇಡು ಬಗೆದವನಿಗೆ ಒಳ್ಳೆಯದನ್ನು ಬಯಸುವುದು ಮಾನವೀಯ ಸಂಬಂಧ. ಅದಕ್ಕಾಗಿ ಸಂಸ್ಕಾರ ಬೇಕು. ಮಕ್ಕಳಿಗೆ ತಾಯಿ ಉತ್ತಮ ಸಂಸ್ಕಾರ ನೀಡಿದರೆ ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಎಂದರು.
ಶಿರಹಟ್ಟಿ -ಕ್ಕಿರೇಶ್ವರ ಶ್ರೀಗಳು ಮಾತನಾಡಿ, ಹೃದಯ ಸಣ್ಣದಾಗಿ ಸಂಬಂಧಗಳು ಉಳಿಯುತ್ತಿಲ್ಲ. ಬೆಳೆಯುತ್ತಿಲ್ಲ. ಮಾನವ ಸರಿಯಿದ್ದರೆ ಜಗತ್ತು ಸರಿ ಇರುತ್ತದೆ. ತಿಳಿಯದೇ ಮಾಡಿದ ತಪ್ಪು ತಪ್ಪಲ್ಲ, ತಪ್ಪನ್ನು ತಿದ್ದಿಕೊಳ್ಳದೇ ಇದ್ದರೆ ಅದು ತಪ್ಪು ಎಂದರು.
ಶಾಸಕ ಎಚ್.ಕೆ ಪಾಟೀಲ ಸ್ವಾಗತಿಸಿ ಮಾತನಾಡಿ, ಸ್ವಾತಿಕತೆಯ ವಭವ ಕಾಣಬೇಕಿದೆ. ಸಮಾಜ ಒಟ್ಟಾಗಿಸುವ ಬದಲಾಗಿ ಇಬ್ಬಾಗಿಸುವ ಕೆಲಸ ಆಗುತ್ತಿವೆ. ಸಮಾಜದಲ್ಲಿನ ಸ್ತರಗಳನ್ನು ಹೋಗಲಾಡಿಸಿ ಎಲ್ಲರು ಸಮಾನರು ಎಂದು ಕಾಣಬೇಕು. ಬೇರ್ಪಡಿಸುವ ಶಕ್ತಿಗಳ ವಿರುದ್ದ ಹೋರಾಡಬೇಕಿದೆ. ಆ ದಿಸೆಯಲ್ಲಿ ಈ ಧರ್ಮಸಭೆ ಕಾರ್ಯ ಮಾಡುತ್ತಿದೆ. ವಸುದವ ಕುಟುಂಬಕಂ' ನಾನ್ನುಡಿಯಂತೆ ಎಲ್ಲರೂ ಒಂದಾಗಬೇಕಿದೆ ಎಂದರು.
ಮಲ್ಲಿಕಾಜರ್ುನ ಶ್ರೀಗಳು, ನಾಲ್ವಡಿ ನೀಲಕಂಠ ಪಟ್ಟದಾರ್ಯ ಶ್ರೀಗಳು, ನಿರ್ಭಯಾನಂದ ಶ್ರೀಗಳು, ಶಿರಹಟ್ಟಿ ಫಕ್ಕಿರೇಶ್ವರ ಶ್ರೀಗಳು, ಡಿ. ಆರ್. ಪಾಟೀಲ, ಎಂ.ಎಂ. ಹಿಂಡಸಗೇರಿ, ವಸಂತ ಲದ್ವಾ, ಅಶೋಕ ಮಂದಾಲಿ, ಸಿದ್ದು ಪಾಟೀಲ ಇದ್ದರು.

ಸೆಳೆದ ಕೃಷಿಮೇಳ:
ಆಶ್ರಮದ ಆವರಣದಲ್ಲಿನ ಕೃಷಿ ಮೇಳ ಜನರನ್ನು ಸೆಳೆಯಿತು. ಸಿರಿಧಾನ್ಯ, ವಿವಿಧ ಪ್ರಕಾರದ ಮಣ್ಣು, ಎರೆಹುಳು ಗೊಬ್ಬರ, ನಾನಾ ಹೂವಿನ ಪ್ರಕಾರ, ಸಾವಯವ ಬೆಲ್ಲ, ಅರಿಶಿನ, ಆಕಳ ಗೋಮೂತ್ರ, ಪಂಚಯೋಗ, ಕೀಟರೋಗ ಹತೋಟಿಗೆ ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿ ಅಸ್ತ್ರ, ಹುಳಿ ಮಜ್ಜಿಗೆ, ಕೀಟ ನಾಶಕಗಳು, ಸಾವಯುವ ತರಕಾರಿ, ಲಿಂಬೆ ಹುಲ್ಲು, ಬೇಲಿ ಮೇಂತೆ, ಮುಳ್ಳು ರಹಿತ ಪಾಪಸ, ಅಝೊಲಾ, ಉಪ್ಪಿನ ಕಲ್ಲು, ಮೆಣಸಿನಕಾಯಿ, ಕಾರದಪುಡಿ, ನವಣೆಯ ಹಿಟ್ಟು ಮತ್ತು ಹಪ್ಪಳ್ಳ, ಮೌಲ್ಯರ್ವತ ಪದಾರ್ಥಗಳು, ಕೃಷಿ ಉಪಕರಣಗಳನ್ನು ನೋಡಲು ಜನರು ಮುಗಿಬ್ಬದರು. ಮಾಹಿತಿ ಪಡೆದರು.