ಜಿಲ್ಲೆ

ಹುರುಳಿಗಿಡ ತಿಂದು 15 ಕುರಿ ಸಾವು

ಎಂ.ಎನ್​.ಕೋಟೆ: ಗುಬ್ಬಿ ತಾಲೂಕಿನ ಮಾದೇನಹಳ್ಳಿ ಮಜರೇ ಮೆಣಸಿನ ಹಟ್ಟಿ ಗ್ರಾಮದಲ್ಲಿ ಪಟ್ಟಣದ ಹುರುಳಿಗಿಡ ತಿಂದು 15 ಕುರಿ ಶನಿವಾರ ಮೃತಪಟ್ಟಿವೆ. ಕುರಿಗಾಹಿ ಕರಿಯಪ್ಪ ಅವರು ಕುರಿಗಳನ್ನು ಮೇಯಿಸಲು ಹೋದಾಗ ಹುಳ್ಳಿಗಿಡ ತಿಂದು ಕುರಿಗಳು ಮೃತಪಟ್ಟಿದ್ದು, ಸ್ಥಳಕ್ಕೆ ಪಶು ವೈಧ್ಯಾಧಿಕಾರಿ ಲೋಹೀತ್​ ಭೇಟಿ ನೀಡಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಕರ್ನಾಟಕ ಕಾಡುಗೋಲ್ಲ ಪರಿಷತ್​ ಗುಬ್ಬಿ ತಾಲೂಕು ಅಧ್ಯಕ್ಷ ಪಾಲಾಕ್ಷಯ್ಯ ಹಾಗೂ ರೈತ ಸಂಘದ ಹೋಬಳಿ ಅಧ್ಯಕ್ಷ ಕುಮಾರಯ್ಯ ಭೇಟಿ ನೀಡಿ ಕುರಿಗಾಯಿ ರೈತ ಕರಿಯಪ್ಪ ಅವರಿಗೆ ಸಾಂತ್ವನ ಹೇಳಿದ್ದಾರೆ.