ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಹಿಂದುಗಳ ಬಲಿ ಪಡೆದಿರುವ ಉಗ್ರರ ಕೃತ್ಯವನ್ನು ಖಂಡಿಸಿ ಹುಮನಾಬಾದ್‌ನಲ್ಲಿ ಶನಿವಾರ ಹಿಂದು ಸಮಾಜಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
ಜಿಲ್ಲೆ

ಹುಮನಾಬಾದ್‌ನಲ್ಲಿ ಸ್ವಯಂ ಘೋಷಿತ ಬಂದ್

ಹುಮನಾಬಾದ್: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಧಾರ್ಮಿಕ ಗುರುತು ಕೇಳಿ ಬರ್ಬರ ಹತ್ಯೆ ಮಾಡಿದ ಉಗ್ರರ ಕೃತ್ಯ ಖಂಡಿಸಿ ಹುಮನಾಬಾದ್‌ನಲ್ಲಿ ಶನಿವಾರ ಜಯಸಿಂಹನಗರ ಹಿಂದು ಸಮಾಜಗಳ ಒಕ್ಕೂಟದಿಂದ ಸ್ವಯಂ ಘೋಷಿತ ಬಂದ್ ಆಚರಿಸಲಾಯಿತು.

ಪಟ್ಟಣದಲ್ಲಿ ಬೆಳಗ್ಗೆ ಅಂಗಡಿ ಮುಗಟ್ಟುಗಳು ಸ್ವಯಂ ಬಂದ್ ಮಾಡಲಾಗಿತ್ತು. ಬಸವೇಶ್ವರ ವೃತ್ತದಿಂದ ಬಾಲಜಿ, ಸರ್ದಾರ್ ಪಟೇಲ್ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮೆರವಣಿಗೆ ಉದ್ದಕ್ಕೂ ಪಾಕಿಸ್ತಾನ ವಿರುದ್ಧ ಘೋಣೆಗಳ ಸುರಿಮಳೆಗೈಯಲಾಯಿತು. ಉಗ್ರರ ಹಾಗೂ ಉಗ್ರರಿಗೆ ಸಾಥ ನೀಡುವರಿಗೂ ಧಿಕ್ಕಾರದ ಘೋಷಣೆ ಕೂಗಲಾಯಿತು.

ಸ್ಥಳೀಯ ಹಿರೇಮಠದ ಶ್ರೀ ರೇಣುಕ ಗಂಗಾಧರ ಶಿವಾಚಾರ್ಯರು ಮಾತನಾಡಿ, ಅಮಾಯಕ ಹಿಂದುಗಳ ಹತ್ಯೆ ನಡೆಸಿರುವ ಉಗ್ರರ ಕೃತ್ಯ ಖಂಡಿಸಿ, ದೇಶ ಹಾಗೂ ಧರ್ಮಕ್ಕೆ ಗಂಡಾತರ ಬಂದಾಗ ನಾವೆಲ್ಲ ಒಂದಾಗಿ ನಿಲ್ಲಬೇಕಾಗಿದೆ. ದೇಶ ಹಾಗೂ ಧರ್ಮ ಗಟ್ಟಿಯಾಗಿಉಳಿಯಲು ಜಾಗ್ರತರಾಗಬೇಕು. ಹೊರಗಿನ ಉಗ್ರರು ಒಂದಡೆಯಾದರೆ, ನಮ್ಮಲ್ಲಿಯೂ ಉಗ್ರರಿದ್ದಾರೆ. ಈ ಬಗ್ಗೆಯು ಎಚ್ಚರಿಕೆ ವಹಿಸಿ ತಕ್ಕಪಾಠ ಕಲಿಸಲು ಮುಂದಾಗಬೇಕೆಂದು ಹೇಳಿದರು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಉಗ್ರರು ಹಿಂದುಗಳನ್ನು ಗುರಿಯಾಗಿಸಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಘಟನೆಗೆ ಇಡೀ ದೇಶದಲ್ಲಿ ವ್ಯಾಪಕ ಖಂಡನೆ ವ್ಯಕ್ತಪಡಿಸಿದೆ. ಈಗಾಗಲೇ ಯಾವುದೇ ರೀತಿಯಿಂದಾದರೂ ಉಗ್ರರ ಹುಟ್ಟಡಗಿಸಲು ಪ್ರಧಾನಿ ನರೇಂದ್ರ ಮೋದಿ ಶಪಥ ತೊಟ್ಟಿದ್ದಾರೆ. ಅದರಂತೆ ಉಗ್ರರು ಅಡಗಿರುವ ಹಾಗೂ ಸಾಥ್ ನೀಡುವವರ ಬಗ್ಗೆ ಪತ್ತೆ ಹಚ್ಚಿ ಕಾರ್ಯಾಚರಣೆ ಆರಂಭಿಸಿ ಉಗ್ರರನ್ನು ಸದೆ ಬಡೆಯಲು ಸೇನಾನಿಗಳು ಮುಂದಾಗಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲï ಮಾತನಾಡಿ, ಹಿಂದು ಪ್ರವಾಸಿಗರನ್ನು ಗುಂಡಿಟ್ಟು ಕೊಂದಿರುವ ಉಗ್ರರ ಕೃತ್ಯವನ್ನು ಖಂಡಿಸಿ, ದೇಶದ ಹಾಗೂ ಧರ್ಮದ ವಿಷಯಕ್ಕೆ ಜಾತಿ ಮತ, ಪಕ್ಷ ಭೇಧ ಎನ್ನದೆ ಎಲ್ಲರೂ ಒಂದಾಗಿ ನಿಲ್ಲಬೇಕು. ಇಂದು ಪಟ್ಟಣದಲ್ಲಿ ಎಲ್ಲರೂ ಸ್ವಯಂ ಘೋಷಿತ ಅಂಗಡಿಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಧನ್ಯವಾದ ಅರ್ಪಿಸುವೆ. ಘಟನೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವರು ಮುಂದಾಗಿದ್ದಾರೆ. ರಾಜ್ಯ ಸರ್ಕಾರದಿಂದ ಸ್ಥಳಕ್ಕೆ ತೆರಳಿದ ಸಚಿವ ಸಂತೋಷ ಲಾಡ ಅವರು, ಪ್ರವಾಸದಲ್ಲಿದ್ದ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮಕೈಗೊಂಡಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ ಮಾತನಾಡಿದರು. ಪ್ರಮುಖರಾದ ಅಭಿಷೇಕ ಪಾಟೀಲ್, ವಿನಾಯಕ ಮಂಡಾ, ಪ್ರಕಾಶ ಬತಲಿ, ಸುನೀಲ ಪಾಟೀಲ್, ಮಹೇಶ ಅಗಡಿ, ಮಲ್ಲಿಕಾರ್ಜುನ ಮಾಶೆಟ್ಟಿ, ನಂದಕುಮಾರ ಚಿದ್ರಿ, ಅನಿಲ ಪಸರ್ಗಿ, ಗಿರೀಶ ಪಾಟೀಲ್, ರಮೇಶ ಕಲ್ಲೂರ, ಮಹಾದೇವ ಗೌಳಿ ಸೇರಿ ಹಿಂದುಪರ ಸಾಮಾಜದ ಒಕ್ಕೂಟದ ಮುಖಂಡರು, ವ್ಯಾಪಾರಸ್ಥರು, ಸಾರ್ಜನಿಕರು ಪಾಲ್ಗೊಂಡಿದ್ದರು.