ಹುಮನಾಬಾದ್‌ನಲ್ಲಿ ಮಾಜಿ ಸಚಿವ ಬಸವರಾಜ ಪಾಟೀಲ್ ಅವರ ೯ನೇ ಪುಣ್ಯಸ್ಮರಣೆ ನಿಮಿತ್ತ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ, ಶ್ರೀ ಆನಂದರಾಜ ಪ್ರಭು, ಪುತ್ರರಾದ ಮಾಜಿ ಸಚಿವ ರಾಜಶೇಖರ ಪಾಟೀಲ್, ಎಂಎಲ್‌ಸಿಗಳಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪ್ರಮುಖರಾದ ವೀರಣ್ಣ ಪಾಟೀಲ್, ರಾಚ್ಚಪ್ಪ ಪಾಟೀಲ್ ಇತರರು ಸಮಾಧಿಗೆ ನಮನ ಸಲ್ಲಿಸಿದರು. 
ಜಿಲ್ಲೆ

ಹುಮನಾಬಾದ್ ಕೊಡುಗೆ ಅವಿಸ್ಮರಣೀಯ

ಹುಮನಾಬಾದ್: ನಿಷ್ಕಳಂಕ ವ್ಯಕ್ತಿತ್ವದ ಮಾಜಿ ಸಚಿವ ದಿ.ಬಸವರಾಜ ಪಾಟೀಲ್ ಹುಮನಾಬಾದ್ ಅವರ ಜಾತ್ಯತೀತ ಮನೋಭಾವ, ಎಲ್ಲರ ಜತೆಗಿನ ಉತ್ತಮ ಸಂಬಂಧ ಹಾಗೂ ಜಿಲ್ಲೆ ಅಭಿವೃದ್ಧಿಗೆ ಮಾಡಿದ ಕಾರ್ಯಗಳು ಸದಾ ಜನಮಾನಸದಲ್ಲಿ ಉಳಿಯುವಂತಿವೆ ಎಂದು ನಾನಾ ಮಠಾಧೀಶರು ಬಣ್ಣಿಸಿದರು.

ಪಟ್ಟಣದ ಶ್ರೀ ಬಸವರಾಜ ಪಾಟೀಲï ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬಸವರಾಜ ಪಾಟೀಲ್ ಹುಮನಾಬಾದ್ ಅವರ ೯ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಹುಮನಾಬಾದ್ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ, ಮಾಣಿಕನಗರದ ಶ್ರೀ ಆನಂದರಾಜ ಪ್ರಭು, ಬಸವತೀರ್ಥ ಮಠದ ಶ್ರೀ ಡಾ.ಸಿದ್ಧಲಿಂಗ ಶಿವಾಚಾರ್ಯ, ಖೇಳಗಿಯ ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯ, ಆಣದೂರದ ಭಂತೆ ಧಮ್ಮಾನಂದ, ಆರ್ಬಿಟ್ ಸಂಸ್ಥೆಯ ಫಾದರ್ ವಿಕ್ಟರ್ ವಾಸ, ಹಫೀಜ್ ಫಾಯೋಜೋದ್ದಿನ್ ಮೌಲಾನ, ಶ್ರೀ ಪ್ರದೀಪ ಮುತ್ಯಾ ಮಾತನಾಡಿ, ದಿವಂಗತ ಬಸವರಾಜ ಪಾಟೀಲ್ ರಾಜಕೀಯ ಜೀವನದ ಜತೆಗೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ನಾಲ್ಕೈದು ದಶಕದ ರಾಜಕೀಯ ಜೀವನದಲ್ಲಿ ಮಾಡಿರುವ ಅವರ ಕಾರ್ಯಸಾಧನೆ ಮಾದರಿಯಾಗಿದೆ. ಅವರೊಬ್ಬ ವ್ಯಕ್ತಿಯಾಗಿರದೆ ಶಕ್ತಿಯಾಗಿ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭ್ಯುದಯಕ್ಕೆ ಶ್ರಮಿಸಿದ್ದರು. ಅವರು ನಮ್ಮ ಮಧ್ಯೆ ಭೌತಿಕವಾಗಿ ಇರದಿದ್ದರೂ ಮಾಡಿರುವ ಕೆಲಸಗಳು ಸದಾ ಸ್ಮರಣೀಯವಾಗಿವೆ. ಅವರ ಆಶಯದಂತೆ ಪುತ್ರರಾದ ಮಾಜಿ ಸಚಿವ ರಾಜಶೇಖರ ಪಾಟೀಲ್ ಸೇರಿ ಕುಟುಂಬದವರು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯುವ ಮೂಲಕ ಅವರ ಆಸೆ ಈಡೇರಿಸುವ ಜತೆಗೆ ಕ್ಷೇತ್ರ ಪ್ರಗತಿ ಕಾಣುವಂತೆ ಮಾಡಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ರ ರಾಜಶೇಖರ ಪಾಟೀಲ್ ಮಾತನಾಡಿ, ಕ್ಷೇತ್ರದಿಂದ ರಾಜ್ಯದವರೆಗೆ ಹುಮನಾಬಾದ್ ಹೆಸರು ಗುರುತಿಸುವಂತೆ ತಂದೆ ದಿ.ಬಸವರಾಜ ಪಾಟೀಲ್ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹಾಗೂ ತಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ನಾನು ಮತ್ತು ಸಹೋದರರು ಸದಾ ಶ್ರಮಿಸುವುದಾಗಿ ಹೇಳಿದರು.

ಪುತ್ರರಾದ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಮಾಜಿ ಸದಸ್ಯರಾದ ಅರವಿಂದ ಅರಳಿ, ಕೆ.ಪುಂಡಲೀಕರಾವ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್,ಪ್ರಮುಖರಾದ ರಾಚಪ್ಪ ಪಾಟೀಲ್, ದಿಲೀಪಕುಮಾರ ತಾಳಂಪಳ್ಳಿ, ಧನರಾಜ ತಾಳಂಪಳ್ಳಿ, ಭೀಮಶೇನರಾವ ಸಿಂಧೆ, ಅಬ್ದುಲ್ ಮನ್ನಾನ್ ಸೇಠ, ಸಂಜಯ ಜಾಗೀರದಾರ, ಮಲ್ಲಿಕಾರ್ಜುನ ಮಾಶೆಟ್ಟಿ, ಲಕ್ಷ್ಮಣರಾವ ಬುಳ್ಳಾ, ಕೇಶವರಾವ ತಳಘಟಕರ, ರಮೇಶ ಡಾಕುಳಗಿ, ಭಾರತಬಾಯಿ ಕೊಡಂಬಲ್, ಶಂಕರ ದೊಡ್ಡಿ, ದಶರಥ ದೊಡ್ಡಿ, ದತ್ತು ಮೂಲಗೆ, ಕಂಟೆಪ್ಪ ದಾನಾ, ಪ್ರಕಾಶ ಬತಲಿ, ಶ್ರೀಮಂತ ಪಾಟೀಲ್, ಪ್ರಭು ತಾಳಮಡಗಿ, ಅಫ್ಸರ್‌ಮಿಯಾ, ಓಂಕಾರ ತುಂಬಾ, ಉಮೇಶ ಜಮಗಿ, ಪಾರ್ವತಿಬಾಯಿ ಸೇರಿಕಾರ, ಮುಕ್ರಾಂ ಝಾ, ಸೋಮಶೇಖರ ಬುಳ್ಳಾ, ರೇವಣಸಿದ್ದ ಪಾಟೀಲ್, ಅಕ್ಷಯ ಪಾಟೀಲ್, ಗಣೇಶ ಪಾಟೀಲ್, ರುದ್ರಂ ಪಾಟೀಲ್, ಹಾವಗೇಶ ಪಾಟೀಲ್ ಇತರರಿದ್ದರು.

ಪುತ್ರರಾದ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಮಾಧಿ ಸ್ಥಳದಲ್ಲಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸಾನ್ನಿಧ್ಯ ಹಾಗೂ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ಗಣ್ಯರು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ನಮ್ಮ ಕುಟುಂಬದ ಮೇಲೆ ಹುಮನಾಬಾದ್ ಕ್ಷೇತ್ರದ ಜನರ ಆಶೀರ್ವಾದವಿದೆ. ಜೀವಂತ ಇರುವವರೆಗೂ ಜನರ ಮಧ್ಯೆ ಇದ್ದುಕೊಂಡು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ. ಇಂದಿನ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ.

| ರಾಜಶೇಖರ ಪಾಟೀಲ್ ಮಾಜಿ ಸಚಿವ