ಹುಮನಾಬಾದ್: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯಯ್ಕೆಯಾಗಿದೆ. ಭದ್ರೇಶ ಪಾಟೀಲ್ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರೆ, ಉಪಾಧ್ಯಕ್ಷರಾಗಿ ಹಳ್ಳಿಖೇಡ (ಕೆ) ಕ್ಷೇತ್ರದ ಕಾಮಶೆಟ್ಟಿ ಪಾಟೀಲ್ ಕಠ್ಠಳ್ಳಿ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿಯಾದ ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ನಡೆದ ಚುನಾವಣೆಗೆ ಎರಡೂ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಪ್ರಕಟಿಸಲಾಯಿತು.
ಸದಸ್ಯರಾದ ರಹೀಮ್ ಖಾನ್ ಪಠಾಣ್, ಅಶೋಕರಡ್ಡಿ ಉಡಬನಳ್ಳಿ, ಖಾಜಾಮಿಯಾ ಚಿಟಗುಪ್ಪ, ಎಂ.ಡಿ.ಮೌಲಾನಾ, ನಾಗರಾಜ ರಾಂಪುರೆ, ತುಕಾರಾಮ ಜಾಮನಗರ, ಸಂಗಪ್ಪ ಪಾಟೀಲ್, ವೀರೇಶ ಭಾವಿ, ಶರಣಪ್ಪ ಗೋಟುರ, ಕಾರ್ಯದರ್ಶಿ ಟಿ.ಬಿ. ಉಣೆಬಾವಿ, ಸಿಬ್ಬಂದಿ ಮಲ್ಲಿಕಾರ್ಜುನ ಬಪ್ಪಣ್ಣ, ಅಬ್ದುಲ್ ಮನ್ನಾನ್ ಇತರರಿದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.