ಬಬಲೇಶ್ವರ : ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಸೋಮವಾರ ಪೊಲೀಸರು ಲಾಠಿ ಚಾರ್ಜ್ ಮಾಡಿ, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದನ್ನು ಖಂಡಿಸಿ, ಮುಳವಾಡ, ರೋಣಿಹಾಳ, ಕಾರಜೋಳ, ಕುಬಕಡ್ಡಿ, ಕಾಖಂಡಕಿ ಹಾಗೂ ಬಬಲೇಶ್ವರ ಭಾಗದ ಸಮಾಜ ಬಾಂಧವರು ಡಿ. 13ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ& ಜಯಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ.
ಬಬಲೇಶ್ವರದ ಬ್ರಹ್ಮಮಠದ ಪೀಠಾಧಿಪತಿ ಹಾಗೂ ಪಂಚಮಸಾಲಿ ಆಲಗೂರು ಪೀಠದ ಮೂರನೇ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು, ವಿಜುಗೌಡ ಎಸ್. ಪಾಟೀಲ, ಸುರೇಶ ಬಿರಾದಾರ, ವಿ.ಎಸ್. ಪಾಟೀಲ, ಈರಣ್ಣ ಶಿರಮಗೊಂಡ, ಸ್ಥಳಿಯ ಮುಖಂಡರಾದ ಸಂಗನಗೌಡ ಪಾಟೀಲ, ಬಸವರಾಜ ಸಿದ್ದಾಪುರ, ಸಂತೋಷ ಬಿರಾದಾರ, ಕಲ್ಲನಗೌಡ ಪಾಟೀಲ, ಗಿರೀಶ ಅವಟಿ, ಸದಾನಂದ ಇಂಡಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.