ಜಿಲ್ಲೆ

ಹುಬ್ಬಳ್ಳಿಯಲ್ಲಿ ಬಿರುಸಿನ ಮಳೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಗುಡುಗು-ಸಿಡಿಲಿನ ಅಬ್ಬರ, ರಭಸದ ಗಾಳಿ ಸಮೇತ ಹುಬ್ಬಳ್ಳಿಯಲ್ಲಿ ಶನಿವಾರ ಒಂದು ತಾಸು ಧಾರಾಕಾರವಾಗಿ ಮಳೆ ಸುರಿಯಿತು.
ಸರಿಯಾಗಿ ಮಧ್ಯಾಹ್ನ 3.30ರಿಂದ ಬಲವಾದ ಗಾಳಿಯೊಂದಿಗೆ ಮಳೆ ಸುರಿಯಿತು. ನಾಲಾ ತುಂಬಿ ಹರಿದ ಪರಿಣಾಮ ನ್ಯೂ ಕಾಟನ್ ಮಾರ್ಕೆಟ್ ರಸ್ತೆ ಜಲಾವೃತಗೊಂಡಿತು. ಗುಡುಗು -ಸಿಡಿಲಿನ ಅಬ್ಬರಕ್ಕೆ ನಗರದ ಜನತೆ ಬೆಚ್ಚಿ ಬಿದ್ದರು.
ಗಾಳಿಯ ರಭಸಕ್ಕೆ ನಗರದ ವಿವಿಧೆಡೆ ಮರದ ರೆಂಬೆ ಕೊಂಬೆಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿವೆ. ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಮಾರ್ಗದಲ್ಲಿ ನೀರು ನಿಂತಿದ್ದವು. ಅಶೋಕನಗರ ರೈಲ್ವೆ ಬ್ರಿಡ್ಜ್, ಲ್ಯಾಮಿಂಗ್ಟರ್ ರಸ್ತೆ, ಆನಂದ ನಗರ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು, ಪಾದಚಾರಿಗಳು ಪರದಾಡಿದರು.