ಜಿಲ್ಲೆ

ಹುಬ್ಬಳ್ಳಿ ಏರ್​ಪೋರ್ಟ್ ಆವರಣದಲ್ಲಿ ಬೆಂಕಿ, ಕೆಲಕಾಲ ಆತಂಕ ಸೃಷ್ಟಿ

ಹುಬ್ಬಳ್ಳಿ: ಇಲ್ಲಿಯ ವಿಮಾನ ನಿಲ್ದಾಣ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.

ನಿಲ್ದಾಣ ಆವರಣದ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಎದುರುಗಡೆ ಇರುವ ಒಣ ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯು ದಟ್ಟ ಹೊಗೆ ಆವರಿಸುವಂತೆ ಮಾಡಿತ್ತು.

ಕೂಡಲೇ ಏರ್​ಪೋರ್ಟ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಮುಂದಾದರು. ಒಣಗಿದ ಗಿಡ, ಹುಲ್ಲು ಇತ್ಯಾದಿ ಇದ್ದಿದ್ದರಿಂದ ಬೆಂಕಿ ಬೇಗ ಆವರಿಸಿತ್ತು. ಕೆಲ ಹೊತ್ತಿನ ಬಳಿಕ ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಆಸ್ತಿ ಹಾನಿಯಾಗಿಲ್ಲ. ವಿಮಾನ ನಿಲ್ದಾಣ ಆವರಣದಲ್ಲಿ ಖಾಲಿ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿ, ಕಸಕ್ಕೆ ಬೆಂಕಿ ತಗುಲಿ ಈ ಘಟನೆ ನಡೆದಿದೆ.

ಬೆಂಕಿ ಆಕಸ್ಮಿಕಕ್ಕೆ ಏನು ಕಾರಣ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.