ಜಿಲ್ಲೆ

ಹುತ್ತಕ್ಕೆ ಹಾಲು ಎರೆದು ಭಕ್ತಿ ಸಮರ್ಪಣೆ

ಕುರುಗೋಡು: ತಾಲೂಕಿನಲ್ಲಿ ನಾಗರ ಪಂಚಮಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ನಾಗರ ಮೂರ್ತಿಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ಹಾಲು ಎರೆದು ಭಕ್ತಿ ಸಮರ್ಪಿಸಿದರು.

ಪಟ್ಟಣದ ಮುಖ್ಯವೃತ್ತದ ಬಳಿ ಇರುವ ನಾಗಪ್ಪನಕಟ್ಟೆ, ನೀಲಕಂಠೇಶ್ವರ ದೇವಸ್ಥಾನ, ಹಳೇ ಅಂಚೆ ಕಚೇರಿ, ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನ, ಕೆಳಗಳಪೇಟೆಯ ದೊಡ್ಡಗಣಪತಿ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಹಾಲು ಎರೆದು ನೈವೇದ್ಯ ಸಮರ್ಪಿಸಲಾಯಿತು. ಕೆಲವರು ಹುತ್ತಕ್ಕೆ ಹಾಲು ಎರೆದರು. ಮನೆಗಳ ಅಂಗಳದಲ್ಲಿ ನಾಗದೇವತೆಗಳ ರಂಗೋಲಿ ಬಿಡಿಸಿರುವುದು ಕಂಡುಬಂತು.