ಜಿಲ್ಲೆ

ಹುತಾತ್ಮರ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ

ಬಸವಕಲ್ಯಾಣ: ಹುಲಸೂರು ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ಭಾನುವಾರ ನಡೆಯಲಿರುವ ಹುತಾತ್ಮರ ಸ್ಮಾರಕಗಳ ಲೋಕಾರ್ಪಣೆ ಸಮಾರಂಭಕ್ಕೆ ಸಲಕ ಸಿದ್ಧತೆ ಪೂರ್ಣಗೊಂಡಿದ್ದು, ಅಪೂರ್ವ ಘಳಿಗೆಗೆ ಕ್ಷಣಗಣನೆ ಶುರುವಾಗಿದೆ. ಐತಿಹಾಸಿಕ ಸಮಾರಂಭದಲ್ಲಿ ಒಂದು ಲಕ್ಷ ಜನ ಭಾವಹಿಸುವ ನಿರೀಕ್ಷೆ ಇದೆ.
ಭಾನುವಾರ ಬೆಳಗ್ಗೆ ೧೦ಕ್ಕೆ ಹುತಾತ್ಮರ ಸ್ಮಾರಕ ಲೋಕಾರ್ಪಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟಿಸಲಿದ್ದಾರೆ.

ಕರ್ನಾಟಕದ ಜಲಿಯನ್‌ವಾಲಾ ಬಾಗ್ ಎಂದೇ ಹೆಸರಾದ ಗೋರ್ಟಾದಲ್ಲಿ ನಡೆದ ಬಲಿದಾನ, ಸ್ವಾತಂತ್ರö್ಯ ಹೋರಾಟ ದೇಶದ ಪ್ರತಿ ಮನೆ ಮನಕ್ಕೆ ತಲುಪಿಸುವ ಉz್ದೆÃಶದಿಂದ ರಾಜ್ಯ ಬಿಜೆಪಿ ಯುವ ಮೋರ್ಚಾ ಒಂಬತ್ತು ವರ್ಷದ ಹಿಂದೆ ಸ್ಮಾರಕ ಯೋಜನೆ ಕೈಗೆತ್ತಿಕೊಂಡಿತ್ತು. ಕಾರಣಾಂತರಗಳಿAದ ನನೆಗುದಿಗೆ ಬಿದ್ದಿತ್ತು. ಇದೀಗ ಉಳಿದ ಕಾಮಗಾರಿ ಪೂರ್ಣಗೊಳಿಸಿದ್ದು, ಲೋಕಾರ್ಪಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಲು ಭರದ ತಯಾರಿ ನಡೆದಿದೆ. ರಾಷ್ಟಿçÃಯ ಸ್ವಯಂ ಸೇವಕ ಸಂಘ ಅಧೀನದ ಕೇಶವ ಕಾರ್ಯ ಸಂವರ್ಧನ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಮಾರಂಭಕ್ಕಾಗಿ ಸ್ಮಾರಕದ ಸಮೀಪವೇ ಮಳೆಯಾದರೂ ಸಮಸ್ಯೆಯಾಗದಂತೆ ವಿಶಾಲವಾದ ಸ್ಥಳದಲ್ಲಿ ಬೃಹತ್ ಪೆಂಡಾಲ ಹಾಕಿದ್ದು, ಭವ್ಯ ವೇದಿಕೆ ಸಿದ್ಧಗೊಂಡಿದೆ. ಸುಮಾರು ೪೦ ಸಾವಿರ ಖುರ್ಚಿ ಹಾಕಲಾಗಿದೆ. ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಸುಗಮ ಸಂಚಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ರಸ್ತೆಯುದ್ದಕ್ಕೂ ಸ್ವಾಗತ ಕಮಾನುಗಳನ್ನು ಹಾಕಿದ್ದು, ಎರಡೂ ಬದಿ ಭಗವಾ ಧ್ವಜಗಳು ಹಾರಾಡುತ್ತಿವೆ. ಮುಖ್ಯ ವೇದಿಕೆ ಮತ್ತು ಅಕ್ಕ-ಪಕ್ಕ ಮಂಟಪ ನಿರ್ಮಿಸಿ ಕಾರ್ಯಕ್ರಮ ವೀಕ್ಷಣೆಗೆ ಪರದೆ ಅಳವಡಿಸಲಾಗಿದೆ. ಬಂದAತಹ ಜನರಿಗೆ ತೊಂದರೆಯಾಗದAತೆ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ.

ಅಮಿತ್ ಷಾ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ್ ಹಾಗೂ ಸ್ಥಳೀಯ ಶಾಸಕ ಶರಣು ಸಲಗರ ಮತ್ತು ನಿರ್ಮಾಣ ಸಮಿತಿ ಸಂಚಾಲಕ ಮುನಿರಾಜು ಗೌಡ (ತುಳಸಿ), ನಿರ್ವಹಣಾ ಸಮಿತಿ ಸಂಚಾಲಕ ಶಿವಾನಂದ ಮಂಠಾಳಕರ ಹಾಗೂ ಕೇಶವ ಕಾರ್ಯ ಸಂವರ್ಧನ ಸಮಿತಿ ಅಧ್ಯಕ್ಷ ಮಾರುತಿ ಪಂಚಭಾವಿ ಇರಲಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.