ಜಿಲ್ಲೆ

ಹುಟ್ಟೂರಲ್ಲಿ ಶವಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ

ಹೊಳೆಆಲೂರ: ಕರೊನಾದಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಹೊಳೆಆಲೂರ ಸಮೀಪದ ಅಮರಗೋಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೂಲತಃ ಅಮರಗೋಳ ಗ್ರಾಮದವರಾದ 72 ವರ್ಷದ ವ್ಯಕ್ತಿವೂಬ್ಬರು ಹಲವಾರು ವರ್ಷಗಳಿಂದ ಬಾಗಲಕೋಟೆಯಲ್ಲಿ ನೌಕರಿ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದರು. ಆದರೂ ಹುಟ್ಟೂರಿನ ಮೇಲೆ ಪ್ರೀತಿ ಹೊಂದಿದ್ದರು. ಪ್ರತಿ ವರ್ಷ ಜರುಗುವ ಗ್ರಾಮ ದೇವತೆ ಜಾತ್ರೆ, ಉತ್ಸವ, ಕುಟುಂದ ಕಾರ್ಯಕ್ರಮ ಇತ್ಯಾದಿ ಸಂದರ್ಭಗಳಲ್ಲಿ ಸ್ವಗ್ರಾಮಕ್ಕೆ ಆಗಾಗ ಬಂದು ಹೋಗುತ್ತಿದ್ದರು. ಒಂದು ವಾರದ ಹಿಂದೆ ಕರೋನಾ ಪೀಡಿತರಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬುಧವಾರ ಬೆಳಗ್ಗೆ ಮೃತಪಟ್ಟಿದ್ದರು. ಅಮರಗೋಳದಲ್ಲಿ ಶವಸಂಸ್ಕಾರ ಮಾಡಲು ಬಂದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಆಗ ಮೃತನ ಕುಟುಂಬದವರು ಜೆಸಿಬಿಯಲ್ಲಿ ಶವವನ್ನು ಹಾಕಿಕೊಂಡು ಹೋಗಿ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.