ಹುಕ್ಕೇರಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಅಧಿಕಾರಿಗಳು ಹಾಗೂ ಕಿರಾಣಿ ವರ್ತಕರ ಸಭೆ ಜರುಗಿತು. ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪಿಎಸ್‌ಐ ಸಿದ್ರಾಮಪ್ಪ ಉನ್ನದ, ಗಣಪತಿ ಕೊಂಗನೊಳಿ ಇದ್ದರು. 
ಜಿಲ್ಲೆ

ಹುಕ್ಕೇರಿಯಲ್ಲಿ ಹತ್ತು ದಿನ ಅಂಗಡಿ ಬಂದ್

ಹುಕ್ಕೇರಿ: ಕರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯ ಹಿತದೃಷ್ಟಿಯಿಂದ ಪಟ್ಟಣದ ಕಿರಾಣಿ ವರ್ತಕರು ಮೇ 10ರಿಂದ 16ರವರೆಗೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ನಿರ್ಣಯ ಕೈಗೊಂಡಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಜರುಗಿದ ಅಧಿಕಾರಿಗಳು, ವ್ಯಾಪಾರಿಗಳ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಮುಂದಿನ 3 ದಿನಗಳ ಕಾಲ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ವ್ಯಾಪಾರ-ವಹಿವಾಟು ನಡೆಸುತ್ತೇವೆ. ಬಳಿಕ 10 ದಿನಗಳ ಅಂಗಡಿಗಳನ್ನು ಬಂದ್ ಮಾಡುತ್ತೇವೆ.

ಗ್ರಾಹಕರು ಸಹಕರಿಸಬೇಕು ಎಂದು ಕಿರಾಣಿ ವರ್ತಕರು ವಿನಂತಿಸಿದರು. ತಾಲೂಕು ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಕಿರಾಣಿ ವರ್ತಕರು ಸಹಕರಿಸದಂತೆ ತರಕಾರಿ ವ್ಯಾಪಾರಿಗಳು ಸಹಕರಿಸಬೇಕು. ಮನೆ ಮನೆಗೆ ತೆರಳಿ ಮಾರಾಟ ಮಾಡಬೇಕು. ಒಂದು ವೇಳೆ ಯಾರಾದರೂ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪಿಎಸ್‌ಐ ಸಿದ್ರಾಮಪ್ಪ ಉನ್ನದ, ಗಣಪತಿ ಕೊಂಗನೊಳಿ, ಪುರಸಭೆ ಉಪಾಧ್ಯಕ್ಷ ಆನಂದ ಗಂಧ, ಸದಸ್ಯ ಸದಾಶಿವ ಕರೆಪ್ಪಗೋಳ, ವರ್ತಕರಾದ ಚೆನ್ನಪ್ಪ ಗಜಬರ, ರವಿ ಸೊಲ್ಲಾಪುರೆ, ಶಂಕರ ಪಟ್ಟಣಶೆಟ್ಟಿ, ಬಸವರಾಜ ಕೋಟಗಿ ಇತರರು ಇದ್ದರು.

ಪಟ್ಟಣದಲ್ಲಿ ಕುಂಟು ನೆಪ ಹೇಳಿಕೊಂಡು ಅನಗತ್ಯ ಓಡಾಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ವಾಹನಗಳನ್ನು ಸೀಜ್ ಮಾಡಲಾಗುವುದು. ಹಾಗಾಗಿ ಸಾರ್ವಜನಿಕರು ಸರ್ಕಾರದ ನಿರ್ಧಾರಕ್ಕೆ ಸಹಕರಿಸಬೇಕು. ಕರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು.| ರಮೇಶ ಛಾಯಾಗೋಳ ಸಿಪಿಐ ಹುಕ್ಕೇರಿ