ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದೇಹಲಿ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನ(ನ್ಯಾಕ್) ತಂಡವು ಬುಧವಾರ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪರಿಶೀಲಿಸಿತು.
ತಂಡದ ಸದಸ್ಯರು ಕಾಲೇಜಿನ ವಿವಿಧ ವಿಭಾಗಗಳ ಶೈಕ್ಷಣಿಕ ಗುಣಮಟ್ಟದ ಕುರಿತು ದಾಖಲೆ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳ ವ್ಯಾಸಂಗದ ಪ್ರಗತಿ, ಕಾಲೇಜಿನ ಅಭಿವೃದ್ಧಿ, ಶೈಕ್ಷಣಿಕ ಪ್ರಕ್ರಿಯೆ ಹಾಗೂ ಫಲಿತಾಂಶ ಬಗ್ಗೆ ಮಾಹಿತಿ ಪಡೆದರು.
ನಂತರ ಬೋಧನೆ, ಕಲಿಕಾ ಸಾಮಗ್ರಿ, ಕಾಲೇಜಿನ ಮೂಲಸೌಕರ್ಯ, ಕಲಿಕಾ ಸಂಪನ್ಮೂಲಗಳು, ಸಂಘಟನೆ, ಆಡಳಿತ ಹಾಗೂ ವಿದ್ಯಾರ್ಥಿಗಳ ಕುರಿತು ಮಾಹಿತಿ ಪಡೆದರಲ್ಲದೆ, ಹಳೆಯ ವಿದ್ಯಾರ್ಥಿಗಳು ಮತ್ತು ಪಾಲಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಕಾಲೇಜು ವಿದ್ಯಾರ್ಥಿಗಳಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ನ್ಯಾಕ್ ತಂಡದ ಸದಸ್ಯರಾದ ಡಾ.ವಿಜಯ ಕೃಷ್ಣ ನಾಯ್ಡು, ಡಾ.ಮುಷ್ತಾಕ್ ಅಹಮದ್ ದರ್ಜಿ, ಡಾ.ಕ್ಸೇವಿಯರ್ವೇದಂ, ಕಾಲೇಜಿನ ಪಾಂಶುಪಾಲ ಬಸವರಾಜು ಹಾಗೂ ಉಪನ್ಯಾಸಕರು ಇದ್ದರು.