ಜಿಲ್ಲೆ

ಹಿರಿಯರ ಶ್ರಮವನ್ನು ಸದಾ ಸ್ಮರಿಸಿ: ಸಿಗ್ಮಾ ಆಸ್ಪತ್ರೆ ನಿರ್ದೇಶಕಿ ಡಾ.ರಾಜೇಶ್ವರಿ ಮಾದಪ್ಪ ಸಲಹೆ

ಮೈಸೂರು: ಸರಸ್ವತಿಪುರಂನಲ್ಲಿರುವ ಸಿಗ್ಮಾ ಆಸ್ಪತ್ರೆಯಲ್ಲಿ ಮಂಗಳವಾರ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.
ಆಸ್ಪತ್ರೆ ನಿರ್ದೇಶಕಿ ಡಾ.ರಾಜೇಶ್ವರಿ ಮಾದಪ್ಪ ಮಾತನಾಡಿ, ಹಿರಿಯರು ಶ್ರಮವಹಿಸಿ ಪಡೆದ ಸ್ವಾತಂತ್ರೃವನ್ನು ಸದಾ ನೆನೆಯಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಮಾತನಾಡಿ, ನಮ್ಮ ದೇಶ, ನಮ್ಮ ನಾಡು ಎನ್ನುವ ಅಭಿಮಾನ ಸದಾ ನಮ್ಮಲ್ಲಿ ಬೆಳೆಯಬೇಕು. ಕೆಲಸ, ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿದರು.
ಆಸ್ಪತ್ರೆಯ ಡಾ.ಕೆ.ಮಾದಪ್ಪ, ಶೈಲಜಾ ಶಂಕರ್, ಡಾ.ಡಿ.ಎನ್.ಸೋಮಣ್ಣ, ಡಾ.ಅನಿಕೇತ್ ಪ್ರಭಾಕರ್ ಸಿಬ್ಬಂದಿ ಇದ್ದರು.