ಹುಮನಾಬಾದ್: ಪಟ್ಟಣದಲ್ಲಿ ಹಿರಿಯ ನಾಗರೀಕರ ದಿನಾಚರಣೆ ನಿಮಿತ್ತ ರೋಟರಿ ಕ್ಲಬ್ ಹುಮನಾಬಾದ್ ಎಲೈಟ್ ಘಟಕದಿಂದ ಹಿರಿಯ ನ್ಯಾಯವಾದಿ ವಿರುಪಾಕ್ಷಪ್ಪ ಅಗಡಿ ಅವರನ್ನು ಸೇರಿದಂತೆ ಪಟ್ಟಣದ ಹಿರಿಯ ನಾಗರಿಕರನ್ನು ಸೋಮವಾರ ಸನ್ಮಾನಿಸಲಾಯಿತು. ಕ್ಲಬ್ ಅಧ್ಯಕ್ಷ ನಾಗರಾಜ ಕರ್ಪೂರ, ಖಜಾಂಚಿ ಗೌತಮ ಕಾಂಬಳೆ, ಸಂಘಟನಾ ಕಾರ್ಯದರ್ಶಿ ಪ್ರಕಾಶ ತಟಪಟಿ, ಮಹೇಶ ಅಗಡಿ ಇತರರಿದ್ದರು.