ಬಾಗಲಕೋಟೆ ನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಜಿ.ಪಂ ಸಹ ಕಾರ್ಯದರ್ಶಿ ಎಸ್.ಎಂ.ಕಾಂಬಳೆ ಉದ್ಘಾಟಿಸಿದರು 
ಜಿಲ್ಲೆ

ಹಿರಿಯ ಜೀವಿಗಳನ್ನ ಗೌರವದಿಂದ ಕಾಣಿ

ಬಾಗಲಕೋಟೆ: ಹಿರಿಯ ಜೀವಿಗಳನ್ನು ಪ್ರೀತಿ, ಗೌರದಿಂದ ಕಾಣುವ ಜೊತೆಗೆ ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಜಿ.ಪಂ ಸಹ ಕಾರ್ಯದರ್ಶಿ ಎಸ್.ಎಂ.ಕಾಂಬಳೆ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮನೆಯಲ್ಲಿ ಒಬ್ಬರು ಹಿರಿಯರಿದ್ದರೆ ಅವರ ಅನುಭವದ ಮಾತುಗಳು ಕೇಳುವದರ ಜೊತೆಗೆ ಅವುಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಹಿರಿಯ ನಾಗರಿಕರಿಗೆ ಸರಕಾರ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬೇಕು ಎಂದರು.

ನಿವೃತ್ತ ಅಽಕಾರಿ ರಮೇಶ ತಳವಾರ ಮಾತನಾಡಿ, ಹಿರಿಯ ನಾಗರಿಕರು ಸಮಾಜದಲ್ಲಿ ಗೌರವಕ್ಕೆ ಪ್ರತೀಕ ಹಾಗೂ ಗೌರವಕ್ಕೆ ಶ್ರೇಷ್ಠರಾದವರು. ಹಿರಿಯ ನಾಗರಿಕರಿಗೆ ಹಲವಾರು ಸಮಸ್ಯೆಗಳಿವೆ. ನಿಮಗೆ ಒಂಟಿತನ ಕಾಡುತ್ತಿದೆ. ನಿಮ್ಮ ಸಮಸ್ಯೆಗೆ ಹಿರಿಯ ನಾಗರಿಕರ ಇಲಾಖೆ ನೆರವಿಗೆ ಇದೆ. ೧೦೯೦ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಇಲಾಖೆ ಮಾಡುತ್ತಿದೆ.
ಹಗಲು ಯೋಗಕ್ಷೇಮ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಪ್ಪ ಗುಳೇದ ಮಾತನಾಡಿ, ಹಿಂದೆ ಹಿರಿಯರ ಆಶೀರ್ವಾದ ಪಡೆದು ಕೆಲಸಕ್ಕೆ ಅಣ ಯಾಗುತ್ತಿದ್ದರು. ಆದರೆ ಇಂದು ಸಂಬಂಧಗಳು ಮೊಬೈಲ್‌ನಲ್ಲಿ ಸೀಮಿತವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯ ನಾಗರಿಕರನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ೩ ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಬಿ.ಎನ್.ದೊಡಮನಿ, ಎಸ್.ಎಚ್.ಶಿರೂರ, ಬಸಯ್ಯ ಹಂಗರಗಿ, ಸತ್ಯಮ್ಮ ಸುಣಗಾರ, ರಾಮಣ್ಣ ಬಿಜಾಪುರ, ಶ್ಯಾಮರಾವ ಪದಕಿ (ಸಮಾಜ ಕ್ಷೇತ್ರ), ನಾಗರಾಜ ಬೀಳಗಿ, ಸಂಗಪ್ಪ ವಾಸನಗೇರಿ, ದೊಡ್ಡಪ್ಪ ಪೂಜಾರ, ರಾಮವ್ವ ಗೌಡರ, ಭೀರಪ್ಪ ಧರೆಗೊಂಡ, ರಂಗಪ್ಪ ಉಪ್ಪಾರ, ಮಲ್ಲಪ್ಪ ಮೆಟಗುಡ್ಡ, ಚಿನ್ನವ್ವ ಬಡಿಗೇರ, ಮಹಾದೇವ ಕೊಣ್ಣೂರ, ನಿಂಗಪ್ಪ ನಾಗನೂರ (ಕೃಷಿ ಕ್ಷೇತ್ರ), ಶಂಕರ ಗುರುಲಿಂಗಪ್ಪ ಒರಬಿನ್ನವರ, ರಾಮಣ್ಣ ಲಕ್ಷ್ಮಣ ಪೂಜಾರಿ (ಜನಪದ), ಎಸ್.ಎಸ್.ಬೆಳಗಲಿ, ರಮೇಶ ತಳವಾರ (ವಿಶೇಷತೆ) ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ಮಂಜುನಾಥ ಪರಸನ್ನವರ, ಜಿಲ್ಲಾ ಮಕ್ಕಳ ಸಮಿತಿ ಸದಸ್ಯ ಎಸ್.ಎಸ್.ಬೆಳಗಲಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ, ಹಿರಿಯ ನಾಗರಿಕರಾದ ಸುರೇಶ ಉಕ್ಕಲಿ, ಬಸಪ್ಪ ಕೋರಿ, ಗುರಮ್ಮ ಸಂಕೀನ, ಪರಶುರಾಮ ತೆಗ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಾಗುಂಡಪ್ಪ ಮುದ್ನೂರ ನಿರೂಪಿಸಿದರು.