ಜಿಲ್ಲೆ

ಹಿರಿಯ ಕಲಾವಿದ ಮೋಹನ್ ಸೋನಾ ನಿಧನ

ಮಂಗಳೂರು: ಹಿರಿಯ ಕಲಾವಿದ ಮೋಹನ ಸೋನಾ ಸುಳ್ಯ (64) ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ಅವರು ಚಿತ್ರ ಕಲಾವಿದರಾಗಿ, ರಂಗಭೂಮಿ ನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದ್ದರು. ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯ ಸ್ಥಾಪಿಸಿ ಹಲವು ಪ್ರಯೋಗಗಳನ್ನು ಮಾಡಿದ್ದ ಅವರು, ಮಕ್ಕಳ ರಂಗಭೂಮಿಯಲ್ಲಿ ಆಸಕ್ತರಾಗಿದ್ದರು. ಕಾರವಾರ ಕಡಲ ತೀರದಲ್ಲಿ ಶಿಲ್ಪಗಳನ್ನು ನಿಲ್ಲಿಸಿ ಗಮನ ಸೆಳೆದಿದ್ದರು.