ಹುಕ್ಕೇರಿ: ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 2024&25ನೇ ಸಾಲಿನ ಹಂಗಾಮಿನಲ್ಲಿ ಕಬ್ಬು ಕಳುಹಿಸಿದ ರೈತರ ಬಿಲ್ ಮತ್ತು ಕಟಾವು ಹಾಗೂ ಸಾರಿಗೆ ಬಿಲ್ ಸಂಪೂರ್ಣವಾಗಿ ಅವರವರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ತಿಳಿಸಿದ್ದಾರೆ.
ಬುಧವಾರ ಪ್ರಕಟಣೆ ಮೂಲಕ 2024&25ನೇ ಹಂಗಾಮಿನ ಮುಕ್ತಾಯದವರೆಗೆ ಕಳುಹಿಸಿದ ಕಬ್ಬಿನ ಬಿಲ್ ಹಾಗೂ ಕಬ್ಬು ಕಟಾವು ಮತ್ತು ಸಾರಿಗೆ ಪೂರ್ಣ ಬಿಲ್ ಮಂಗಳವಾರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.